ಭಾರತದ ಪುರುಷರ ತಂಡಕ್ಕೆ 1-2 ಸೋಲು

Update: 2019-08-18 17:56 GMT

ಟೋಕಿಯೊ, ಆ.18: ಭಾರತದ ಹಾಕಿ ತಂಡ ಒಲಿಂಪಿಕ್ ಟೆಸ್ಟ್ ಇವೆಂಟ್‌ನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 1-2 ಅಂತರದಲ್ಲಿ ಸೋಲು ಅನುಭವಿಸಿದೆ.

ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ಜಮೆ ಮಾಡಿ ಭಾರತಕ್ಕೆ 1-0 ಮುನ್ನಡೆ ದೊರಕಿಸಿಕೊಟ್ಟಿದ್ದರು.

 ನ್ಯೂಝಿಲ್ಯಾಂಡ್ ವಿರುದ್ಧ ಆರಂಭದಲ್ಲಿ ಹಿಡಿತ ಸಾಧಿಸಿದ್ದ ಭಾರತದ ಹಿಡಿತ ಕೊನೆಯ ವೇಳೆ ಸಡಿಲಗೊಂಡಿತು. 47ನೇ ನಿಮಿಷದಲ್ಲಿ ಜಾಕೋಬ್ ಸ್ಮಿತ್ ಮತ್ತು 60ನೇ ನಿಮಿಷದಲ್ಲಿ ಸ್ಯಾಮ್ ಲ್ಯಾನೆ ಗೋಲು ಜಮೆ ಮಾಡಿ ನ್ಯೂಝಿಲ್ಯಾಂಡ್‌ಗೆ ಗೆಲುವಿನ ನಗೆ ಬೀರಲು ನೆರವಾದರು.

ಭಾರತ ಮೊದಲ ಪಂದ್ಯದಲ್ಲಿ ಮಲೇಶ್ಯ ವಿರುದ್ಧ 6-0 ಗೆಲುವಿನೊಂದಿಗೆ ಅಭಿಮಾನ ಆರಂಭಿಸಿತ್ತು. ಮಂಗಳವಾರ ನಡೆಯಲಿರುವ ಮೂರನೇ ಪಂದ್ಯದಲ್ಲಿ ಜಪಾನನ್ನು ಭಾರತ ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News