300 ಮೀಟರ್ ಓಟದಲ್ಲಿ ಹಿಮಾದಾಸ್, ಅನಸ್‌ಗೆ ಚಿನ್ನ

Update: 2019-08-18 17:59 GMT

ಮೀಟಿಂಕ್ ರೆಲಿಟರ್, ಆ.18: ಭಾರತದ ಅಥ್ಲೀಟ್‌ಗಳಾದ ಹಿಮದಾಸ್ ಮತ್ತು ಮುಹಮ್ಮದ್ ಅನಸ್ ಝೆಕ್ ಗಣರಾಜ್ಯದ ಅಥ್ಲಿಟಿಕ್ ಮೀಟಿಂಕ್ ರಿಲಿಟರ್ ಕ್ರೀಡಾಕೂಟದ 300 ಮೀಟರ್ ಓಟದಲ್ಲಿ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಚಿನ್ನ ಬಾಚಿಕೊಂಡಿದ್ದಾರೆ.

ಅಸ್ಸಾಮಿನ ಕುವರಿ ಹಿಮದಾಸ್ ಕಳೆದ ಜುಲೈ 2ರಿಂದ ಈ ತನಕ ನಡೆದ ಕ್ರೀಡಾಕೂಟಗಳಲ್ಲಿ ಒಟ್ಟು 6ನೇ ಅಂತರ್‌ರಾಷ್ಟ್ರೀಯ ಚಿನ್ನವನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ.

ಅನಸ್ 32.41 ಸೆಕೆಂಡ್‌ಗಳಲ್ಲಿ 300 ಮೀಟರ್ ಓಟದಲ್ಲಿ ಗುರಿ ತಲುಪಿ ಚಿನ್ನ ಬಾಚಿಕೊಂಡರು. ಅನಸ್ ಇದರೊಂದಿಗೆ ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ದೋಹಾದಲ್ಲಿ ನಡೆಯಲಿರುವ ವರ್ಲ್ಡ್ ಚಾಂಪಿಯನ್‌ಶಿಪ್‌ನ 400 ಮೀಟರ್ ಓಟದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ, ಆದರೆ ಹಿಮದಾಸ್ ಈ ಮೊದಲೇ ಈ ಕೂಟದಲ್ಲಿ ಅವಕಾಶ ದೃಢಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News