ತೆಲುಗು ಟೈಟಾನ್ಸ್ ಗೆ ಜಯ

Update: 2019-08-18 18:10 GMT

ಚೆನ್ನೈ, ಆ.18: ಇಲ್ಲಿನ ಜವಾಹರ್‌ಲಾಲ್ ನೆಹರೂ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್‌ನ್ನು 40-29 ಅಂತರದಲ್ಲಿ ತೆಲುಗು ಟೈಟಾನ್ಸ್ ಮಣಿಸಿದೆ.

ಸಿದ್ದಾರ್ಥ್ ದೇಸಾಯಿ 8 ಅಂಕಗಳನ್ನು ಕಲೆ ಹಾಕಿ ತೆಲುಗು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಸಾಯಿ ಸಹೋದರ ಸೂರಜ್ ದೇಸಾಯಿ 6 ಮತ್ತು ವಿಕಾಸ್ ಕಂಡೊಲಾ 9 ಅಂಕಗಳನ್ನು ತಂಡದ ಖಾತೆಗೆ ಜಮೆ ಮಾಡಿದರು.

ಸಿದ್ದಾರ್ಥ್ ಎರಡನೇ ಬಾರಿ ‘ಸೂಪರ್ 10’ ಅಂಕಗಳನ್ನು (10ಕ್ಕೂ ಅಧಿಕ ಅಂಕಗಳು) ಗಳಿಸಿದ್ದಾರೆ. ಇದು ಟೈಟಾನ್ಸ್ ತಂಡದ ಎರಡನೇ ಗೆಲುವು. ಈ ವರೆಗೆ ಈ ಆವೃತ್ತಿಯಲ್ಲಿ ಆಡಿರುವ 9 ಪಂದ್ಯಗಳ ಪೈಕಿ 5ರಲ್ಲಿ ಸೋಲು ಅನುಭವಿಸಿದೆ.

ಇಂದು ನಡೆದ ಪುಣೇರಿ ಪಾಲ್ಟಾನ್ ಮತ್ತು ತಮಿಳು ತಲೈವಾಸ್ ತಂಡಗಳ ನಡುವಿನ ಇನ್ನೊಂದು ಪಂದ್ಯ 31-31 ಅಂಕಗಳಿಂದ ಡ್ರಾದಲ್ಲಿ ಕೊನೆಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News