‘ಸ್ಪೆಲಿಂಗ್ ಬೀ’: ಅಮೆರಿಕದಲ್ಲಿ 2.14 ಲಕ್ಷ ರೂ. ಗೆದ್ದ ಭಾರತ ಮೂಲದ ಬಾಲಕ

Update: 2019-08-19 16:39 GMT

ನ್ಯೂಯಾರ್ಕ್, ಆ. 19: ಭಾರತೀಯ ಅಮೆರಿಕನ್ ವಿದ್ಯಾರ್ಥಿ, ನ್ಯೂಜರ್ಸಿಯ ನವನೀತ್ ಮುರಳಿ 2019ರ ದಕ್ಷಿಣ ಏಶ್ಯ ಸ್ಪೆಲಿಂಗ್ ಬೀ ಸ್ಪರ್ಧೆಯಲ್ಲಿ ವಿಜಯಿಯಾಗಿದ್ದಾರೆ.

====='flipe'----- ಎಂಬ ಪದದ ಸ್ಪೆಲಿಂಗನ್ನು ಸರಿಯಾಗಿ ಹೇಳುವ ಮೂಲಕ ಅವರು ವಾರ್ಷಿಕ ಪ್ರಶಸ್ತಿ ಮತ್ತು ನಗದು 3,000 ಡಾಲರ್ (ಸುಮಾರು 2.14 ಲಕ್ಷ ರೂಪಾಯಿ) ಗೆದ್ದಿದ್ದಾರೆ.

ಸೌತ್ ಏಶ್ಯನ್ ಸ್ಪೆಲಿಂಗ್ ಬೀ (ಎಸ್‌ಎಎಸ್‌ಬಿ) ದಕ್ಷಿಣ ಏಶ್ಯ ಮೂಲದ ಮಕ್ಕಳಿಗಾಗಿ ಅಮೆರಿಕದಲ್ಲಿ ಪ್ರತಿ ವರ್ಷ ನಡೆಸಲಾಗುತ್ತಿರುವ ಸ್ಪೆಲಿಂಗ್ ಬಿ ಸ್ಪರ್ಧೆಯಾಗಿದೆ.

‘‘ನವನೀತ್ ಮುರಳಿ, 2019 ಎಸ್‌ಎಎಸ್‌ಬಿ ಚಾಂಪಿಯನ್!’’ ಎಂದು ಎಸ್‌ಎಎಸ್‌ಬಿ ತನ್ನ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿದೆ.

ಹೆತ್ತವರು ಅಥವಾ ಅಜ್ಜ-ಅಜ್ಜಿಯರ ಪೈಕಿ ಕನಿಷ್ಠ ಯಾರಾದರೂ ಒಬ್ಬರು ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ದೀವ್ಸ್, ನೇಪಾಳ, ಪಾಕಿಸ್ತಾನ ಅಥವಾ ಶ್ರೀಲಂಕಾ ಮೂಲದವರಾಗಿದ್ದರೆ, 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News