ಶ್ರೀಲಂಕಾ ಸೇನಾ ಮುಖ್ಯಸ್ಥರಾಗಿ ಯುದ್ಧಾಪರಾಧಗಳ ಆರೋಪಿ

Update: 2019-08-19 16:42 GMT

 ಕೊಲಂಬೊ, ಆ. 19: ಯುದ್ಧಾಪರಾಧ ನಡೆಸಿದ ಆರೋಪಗಳನ್ನು ಎದುರಿಸುತ್ತಿರುವ ಸೇನಾಧಿಕಾರಿ ಮೇಜರ್ ಜನರಲ್ ಶವೇಂದ್ರ ಸಿಲ್ವ (55)ರನ್ನು ಶ್ರೀಲಂಕಾದ ನೂತನ ಸೇನಾ ಮುಖ್ಯಸ್ಥರಾಗಿ ಸೋಮವಾರ ನೇಮಿಸಲಾಗಿದೆ.

ಇದಕ್ಕೂ ಮೊದಲು ಅವರನ್ನು ಜನವರಿಯಲ್ಲಿ ಸೇನೆಯ ಎರಡನೇ ಅತ್ಯುನ್ನತ ಸ್ಥಾನವಾಗಿರುವ ಚೀಫ್ ಆಫ್ ಸ್ಟಾಫ್ ಹುದ್ದೆಗೆ ನೇಮಿಸಲಾಗಿತ್ತು.

‘‘ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಮೇಜರ್ ಜನರಲ್ ಶವೇಂದ್ರ ಸಿಲ್ವರನ್ನು ಸೇನೆಯ 23ನೇ ಕಮಾಂಡರ್ ಆಗಿ ನೇಮಿಸಿದ್ದಾರೆ. ಇದರೊಂದಿಗೆ ಅವರಿಗೆ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಭಡ್ತಿಯನ್ನೂ ನೀಡಲಾಗಿದೆ’’ ಎಂದು ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಎಲ್ಟಿಟಿಇ ವಿರುದ್ಧದ ಆಂತರಿಕ ಯುದ್ಧದ ವೇಳೆ ಅವರು ಸೇನಾ ಘಟಕವೊಂದರ ನೇತೃತ್ವವನ್ನು ವಹಿಸಿದ್ದರು. ಎಲ್ಟಿಟಿಇ ವಿರುದ್ಧದ ಯುದ್ಧದ ಅಂತಿಮ ಹಂತದಲ್ಲಿ ಅವರು ಯುದ್ಧಾಪರಾಧಗಳನ್ನು ನಡೆಸಿದ್ದಾರೆ ಎಂದು ವಿಶ್ವಸಂಸ್ಥೆ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News