ಭಾರತದಿಂದ ಇರಾನ್ ದಿಗ್ಬಂಧನೆ ಉಲ್ಲಂಘನೆಗೆ ಪುರಾವೆಯಿಲ್ಲ

Update: 2019-08-21 18:24 GMT

ವಾಶಿಂಗ್ಟನ್, ಆ. 21: ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಬಂಧನಗಳನ್ನು ಭಾರತ ಉಲ್ಲಂಘಿಸುತ್ತಿದೆ ಎನ್ನುವುದಕ್ಕೆ ಅಮೆರಿಕದ ಬಳಿ ಪುರಾವೆಯಿಲ್ಲ ಎಂದು ಇರಾನ್‌ಗೆ ಅಮೆರಿಕದ ವಿಶೇಷ ಪ್ರತಿನಿಧಿ ಬ್ರಯಾನ್ ಹುಕ್ ಮಂಗಳವಾರ ಹೇಳಿದ್ದಾರೆ.

ಇಲ್ಲಿನ ವಿದೇಶಿ ಪತ್ರಿಕಾ ಕೇಂದ್ರದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡುತ್ತಿದ್ದರು. ಅಫ್ಘಾನಿಸ್ತಾನಕ್ಕಾಗಿ ಭಾರತ ಇರಾನ್‌ನಲ್ಲಿ ನಿರ್ಮಿಸಿರುವ ಚಬಹಾರ್ ಬಂದರಿನ ಮೂಲಕ ಅಮೆರಿಕದ ದಿಗ್ಬಂಧನಗಳನ್ನು ಭಾರತ ಉಲ್ಲಂಘಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪತ್ರಕರ್ತರೊಬ್ಬರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

 ‘‘ಭಾರತ ತನ್ನ ಸರಕುಗಳನ್ನು ಇರಾನ್‌ನಲ್ಲಿರುವ ಚಬಹಾರ್ ಮೂಲಕ ಕಳುಹಿಸುತ್ತಿದೆ. ಈ ಸರಕುಗಳನ್ನು ಬಳಿಕ ಅಫ್ಘಾನಿಸ್ತಾನಕ್ಕೆ ಪೂರೈಸಲಾಗುತ್ತದೆ. ಚಬಹಾರ್ ಬಂದರನ್ನು ಬಳಸುವುದನ್ನು ನಿಲ್ಲಿಸುವಂತೆ ಈಗ ಭಾರತದ ಮೇಲೆ ಅಮೆರಿಕದ ಒತ್ತಡವೂ ಇದೆ. ಆದುದರಿಂದ, ಅಫ್ಘಾನಿಸ್ತಾನವನ್ನು ಅಭಿವೃದ್ಧಿಪಡಿಸುವ ನಿಮ್ಮ ಯೋಜನೆಗಳನ್ನು ಹೇಗೆ ಜಾರಿಗೊಳಿಸುತ್ತೀರಿ?’’ ಎಂದು ಪತ್ರಕರ್ತ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹುಕ್, ‘‘ನೀವು ಹೇಳುತ್ತಿರುವ ವಿಷಯಕ್ಕೆ ಸಂಬಂಧಿಸಿದ ಪುರಾವೆ ನನ್ನಲ್ಲಿ ಇದ್ದಂತಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News