ಭಾರತದ ನೂತನ ಬ್ಯಾಟಿಂಗ್ ಕೋಚ್ ಆಗಿ ವಿಕ್ರಮ್ ರಾಥೋಡ್

Update: 2019-08-22 16:43 GMT

ಮುಂಬೈ, ಆ.22: ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಿಕ್ರಮ್ ರಾಥೋಡ್ ಭಾರತದ ನೂತನ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಭರತ್ ಅರುಣ್ ಹಾಗೂ ಆರ್.ಶ್ರೀಧರ್ ಕ್ರಮವಾಗಿ ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ.

ಎಂಎಸ್‌ಕೆ ಪ್ರಸಾದ್ ನೇತೃತ್ವದ ಸಮಿತಿಯು ಈ ಮೂವರನ್ನು ಹೆಸರನ್ನು ಶಿಫಾರಸು ಮಾಡಿದೆ.

 ಸಂಜಯ್ ಬಂಗಾರ್ ಅವರಿಂದ ತೆರವಾದ ಸ್ಥಾನ ತುಂಬಿರುವ 50ರ ಹರೆಯದ ರಾಥೋಡ್ 1996ರಲ್ಲಿ 6 ಟೆಸ್ಟ್ ಹಾಗೂ 7 ಏಕದಿನ ಪಂದ್ಯಗಳನ್ನು ಆಡಿದ್ದರೂ ಹೆಚ್ಚು ಯಶಸ್ಸು ಸಾಧಿಸಿರಲಿಲ್ಲ. ಪಂಜಾಬ್ ಪರ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದ ಅವರು ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಸದಸ್ಯರಾಗಿದ್ದರು.

 ಮಾಜಿ ಮುಂಬೈ ಇಂಡಿಯನ್ಸ್ ಫಿಸಿಯೋ ನಿತಿನ್ ಪಟೇಲ್ ಸ್ಟ್ರೆಂತ್ ಹಾಗೂ ಕಂಡೀಶನಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಅತಿರೇಕದ ವರ್ತನೆಯಿಂದ ವಿವಾದಕ್ಕೆ ಸಿಲುಕಿದ್ದ ಮ್ಯಾನೇಜರ್ ಸುನೀಲ್ ಸುಬ್ರಹ್ಮಣ್ಯಮ್ ಬದಲಿಗೆ ಗಿರೀಶ್ ಡೊಂಗ್ರೆ ನೇಮಕವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News