×
Ad

ಜಲಜ್ ಸಕ್ಸೇನಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲೆ

Update: 2019-08-28 23:39 IST

ಆಲೂರು, ಆ.28: ಇಂಡಿಯಾ ರೆಡ್ ಮತ್ತು ಇಂಡಿಯಾ ಬ್ಲೂ ತಂಡಗಳ ನಡುವಿನ ದುಲೀಪ್ ಟ್ರೋಫಿ ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದ್ದರೂ ಆಲ್‌ರೌಂಡರ್ ಜಲಜ್ ಸಕ್ಸೇನಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಬ್ಲೂ ತಂಡದ ಪರ ಆಡುತ್ತಿರುವ 32ರ ಹರೆಯದ ಜಲಜ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 6 ಸಾವಿರ ರನ್ ಮತ್ತು 300 ವಿಕೆಟ್ ಪಡೆದಿರುವ ಏಕೈಕ ಆಟಗಾರ. ಸಕ್ಸೇನಾ ಈವರೆಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದಿಲ್ಲ. ಬಲಗೈ ಆಪ್ ಸ್ಪಿನ್ನರ್ ಜಲಜ್ ಈ ತನಕ 113ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 6,044 ರನ್ ಮತ್ತು 305 ವಿಕೆಟ್ ಪಡೆದಿದ್ದಾರೆ. ಈ ಪ್ರದರ್ಶನದ ಆಧಾರದಲ್ಲಿ ಕಳೆದ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ 20 ಲಕ್ಷ ರೂ.ಗಳಿಗೆ ಹರಾಜಾಗಿದ್ದರು. ರಾಷ್ಟ್ರೀಯ ಆಯ್ಕೆ ಸಮಿತಿಯು ಸಕ್ಸೇನಾರನ್ನು ಕಡೆಗಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News