×
Ad

ಉಷಾ ಮಡಿಲಲ್ಲಿ ಕುಳಿತ ಮುದ್ದಿನ ಹುಡುಗಿ ಸಿಂಧು ಫೋಟೊ ವೈರಲ್

Update: 2019-08-28 23:47 IST

  ಹೈದರಾಬಾದ್, ಆ.28: ಭಾರತದ ಮಾಜಿ ಓಟದ ರಾಣಿ ಪಿ.ಟಿ.ಉಷಾ ಮಡಿಲಲ್ಲಿ ಕುಳಿತ ನಗುಮುಖದ ಹುಡುಗಿಯ ಚಿತ್ರ ಇಂಟರ್‌ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ. ಈ ಹುಡುಗಿಯ ಚಿತ್ರ ನೋಡಿದ ತಕ್ಷಣ ನಿಮಗೆ ಅಚ್ಚರಿಯಾಗಬಹುದು. ಈಕೆ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ನಲ್ಲಿ ಚಿನ್ನ ಜಯಿಸಿರುವ ಭಾರತದ ಕುವರಿ ಪಿ.ವಿ. ಸಿಂಧು. ಹದಿನೆಂಟು ವರ್ಷಗಳ ಹಿಂದೆ ಅಂದರೆ 2001ರಲ್ಲಿ ಪಯ್ಯಿಳಿ ಎಕ್ಸ್ ಪ್ರೆಸ್ ಖ್ಯಾತಿಯ ಪಿ.ಟಿ. ಉಷಾ ಅಥ್ಲೆಟಿಕ್ಸ್‌ನಿಂದ ನಿವೃತ್ತಿಯಾದ ಒಂದು ವರ್ಷಗಳ ನಂತರ ತೆಗೆದಿರುವ ಚಿತ್ರವನ್ನು ಇಂಟರ್‌ನೆಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಎಲ್ಲೆಡೆ ವೈರಲ್ ಆಗಿದೆ.

  ಪಿ.ಟಿ.ಉಷಾ ಅವರು ಅಂದಿನ ನೆನಪುಗಳನ್ನು ಆಂಗ್ಲ ಪತ್ರಿಕೆ ಯೊಂದರಲ್ಲಿ ಹಂಚಿಕೊಂಡಿದ್ದಾರೆ. ಉಷಾ ರೈಲ್ವೆಯಲ್ಲಿ ಉದ್ಯೋಗದಲ್ಲಿದ್ದರು. ಸಿಂಧು ತಂದೆ ರಮಣ್ ವಾಲಿಬಾಲ್ ಆಟಗಾರ. ರೈಲ್ವೆಯಲ್ಲಿ ಪಿ.ಟಿ.ಉಷಾ ಜೊತೆ ಉದ್ಯೋಗದಲ್ಲಿದ್ದರು. ಹೀಗಾಗಿ ಉಷಾಗೆ ಸಿಂಧು ಕುಟುಂಬ ಹೆಚ್ಚು ಹತ್ತಿರವಾಗಿತ್ತು. 2001ರಲ್ಲಿ ಹೈದರಾಬಾದ್ ರೈಲ್ವೆ ಕ್ರೀಡಾ ಕೂಟ ನಡೆದಾಗ ಉಷಾ ಅಲ್ಲಿಗೆ ತೆರಳಿದ್ದರು. ಐದು ದಿನಗಳ ಕಾಲ ಸಿಂಧು ಮನೆಯಲ್ಲಿ ತಂಗಿದ್ದರು. ಮುದ್ದಿನ ಹುಡುಗಿ ಸಿಂಧು ಜೊತೆ ಉಷಾ ಸಮಯ ಕಳೆದಿದ್ದರು. ಉಷಾ ಮಡಿಲಲ್ಲಿ ಮೇಲೆ ಸಿಂಧು ಕುಳಿತಿದ್ದ ಆ ಕ್ಷಣವನ್ನು ಸಿಂಧು ತಂದೆ ರಮಣ್ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದರು. 2016ರಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಜಯಿಸಿದ ಸಂದರ್ಭದಲ್ಲಿ ಉಷಾಗೆ ಈ ಚಿತ್ರವನ್ನು ಕಳುಹಿಸಿಕೊಟ್ಟಿದ್ದರು. ಈ ಭಾವಚಿತ್ರವನ್ನು ಉಷಾ ತಮ್ಮ ಬಳಿ ಇಟ್ಟುಕೊಂಡಿದ್ದರು.  ಈ ಭಾವಚಿತ್ರವನ್ನು ಉಷಾ ತಮ್ಮ ಬಳಿ ಇಟ್ಟುಕೊಂಡಿದ್ದರು.

      ಸಿಂಧು ಸಾಧನೆಯನ್ನು ಕೊಂಡಾಡಿರುವ ಉಷಾ ಅವರು ಸಿಂಧು ಮುಂದಿನ ಪೀಳಿಗೆಯ ಬ್ಯಾಡ್ಮಿಂಟನ್ ಆಟಗಾರ್ತಿಯರಿಗೆ ಸ್ಪೂರ್ತಿಯಾಗಲಿದ್ದಾರೆ ಎಂದು ಹೇಳಿದ್ದಾರೆ. ಸಿಂಧು ಮುಂದೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಲಿದ್ದಾರೆ ಎಂದು ಉಷಾ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News