ಟಿ-20 ಅಂತರ್ ರಾಷ್ಟ್ರೀಯ ಕ್ರಿಕೆಟ್ ಗೆ ಮಿಥಾಲಿ ರಾಜ್ ವಿದಾಯ
ಹೊಸದಿಲ್ಲಿ, ಸೆ.3: ಭಾರತದ ಮಹಿಳಾ ಟ್ವೆಂಟಿ-20 ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಕ್ರಿಕೆಟ್ ಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.
2006 ರಲ್ಲಿ ಭಾರತದ ಮೊದಲ ಟ್ವೆಂಟಿ -20 ನಾಯಕರಾಗಿದ್ದ ಅವರು, 89 ಪಂದ್ಯಗಳನ್ನು ಆಡಿದ್ದಾರೆ.2364 ರನ್ ಗಳಿಸಿದ್ದಾರೆ . ಇದು ಭಾರತದ ಮಹಿಳಾ ಕ್ರಿಕೆಟ್ ನಲ್ಲಿ ದೊಡ್ಡ ಸಾಧನೆ. 2012, 2014 ಮತ್ತು 2016 ರಲ್ಲಿ ವಿಶ್ವಕಪ್ ಸೇರಿದಂತೆ 32 ಟ್ವೆಂಟಿ-20 ಪಂದ್ಯಗಳಲ್ಲಿ ಅವರು ಭಾರತ ತಂಡವನ್ನು ನಾಯಕಿಯಾಗಿ ಮುನ್ನಡೆಸಿದ್ದರು.
ಇಂಗ್ಲೆಂಡ್ ವಿರುದ್ಧ, ಗುವಾಹಟಿಯಲ್ಲಿ ಕೊನೆಯ ಪಂದ್ಯವನ್ನು ಆಡಿದ್ದ ಅವರು ಅಜೇಯ 32 ಎಸೆತಗಳಲ್ಲಿ 32 ರನ್ ಗಳಿಸಿದ್ದರು. ಟ್ವೆಂಟಿ -20 ಯಲ್ಲಿ ಗರಿಷ್ಠ ರನ್ ಗಳಿಸಿರುವ ವಿಶ್ವದ ಆಟಗಾರ್ತಿಯರ ಪೈಕಿ ಮಿಥಾಲಿ 6ನೇ ಸ್ಥಾನದಲ್ಲಿದ್ದಾರೆ.
2021 ಏಕದಿನ ವಿಶ್ವಕಪ್ ಕ್ರಿಕೆಟ್ ಗೆ ತಯಾರಿ ನೆಡೆಸುವ ಉದ್ದೇಶಕ್ಕಾಗಿ ತಾನು 20 ಟ್ವೆಂಟಿ-20 ಕ್ರಿಕೆಟ್ ನಿಂದ ನಿವೃತ್ತಿ ಹೊಂದಲು ಬಯಸುತ್ತೇನೆ" ಎಂದು 37ರ ಹರೆಯದ ಮಿಥಾಲಿ ರಾಜ್ ಅವರು ಹೇಳಿದರು.
"ನನ್ನ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದು ನನ್ನ ಕನಸಾಗಿ ಉಳಿದಿದೆ ಮತ್ತು ಆ ಕನಸನ್ನು ನನಸಾಗಿಸಲು ಅತ್ಯುತ್ತಮ ಪ್ರಯತ್ನ ನಡೆಸಲು ಬಯಸುತ್ತೇನೆ ತಮಗೆ ನಿರಂತರ ಬೆಂಬಲ ನೀಡಿರುವ ಬಿಸಿಸಿಐಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ದಕ್ಷಿಣ ಆಫ್ರಿಕ ವಿರುದ್ಧದ ತವರು ಸರಣಿಗೆ ತಯಾರಿ ನಡೆಸುತ್ತಿರುವ ಭಾರತದ ಮಹಿಳಾ ತಂಡಕ್ಕೆ ಶುಭ ಹಾರೈಸಿದ್ದಾರೆ "