ಭಾರತದ ಐದು ನಗರಗಳ ಪರಿಶೀಲನೆ

Update: 2019-09-11 17:47 GMT

ಮುಂಬೈ, ಸೆ.11: ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಅಂಡರ್-17 ಮಹಿಳಾ ವಿಶ್ವಕಪ್ ಪಂದ್ಯಗಳ ಆತಿಥ್ಯವಹಿಸಲು ತುದಿಗಾಲಲ್ಲಿ ನಿಂತಿರುವ ಐದು ನಗರಗಳನ್ನು ಪರಿಶೀಲನೆ ನಡೆಸಿದೆ.

2020ರ ಅಂಡರ್-17 ಮಹಿಳಾ ವಿಶ್ವಕಪ್‌ನ್ನು ಭಾರತ ಆಯೋಜಿಸಲಿದೆ ಎಂದು ಮಾರ್ಚ್ ನಲ್ಲಿ ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ಘೋಷಿಸಿದ್ದರು.

‘‘ನಾವು ಇದೀಗ ಕೋಲ್ಕತಾ, ಭುವನೇಶ್ವರ, ಅಹ್ಮದಾಬಾದ್, ಗೋವಾ ಹಾಗೂ ನವಿ ಮುಂಬೈ ನಗರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ದ್ದೇವೆ. ಇತರ ನಗರಗಳು ವಿಶ್ವಕಪ್ ಪಂದ್ಯಗಳ ಆತಿಥ್ಯವಹಿಸಿಕೊಳ್ಳಲು ಬಹಳಷ್ಟು ಆಸಕ್ತಿ ವ್ಯಕ್ತಪಡಿಸಿವೆ’’ಎಂದು ಟೂರ್ನಮೆಂಟ್‌ನ ನಿರ್ದೇಶಕಿ ರೊಮಾ ಖನ್ನಾ ಸುದ್ದಿಗಾರರಿಗೆ ತಿಳಿಸಿದರು. ಖನ್ನಾ ಹಾಗೂ ತಾಂತ್ರಿಕ ಅಭಿವೃದ್ಧಿ ಸೇವಾ ಕಾರ್ಯಕ್ರಮದ ಮ್ಯಾನೇಜರ್ ಫಿಲಿಪ್ ಝಿಮ್ಮರ್‌ಮನ್‌ಸ್ಥಳೀಯ ಫುಟ್ಬಾಲ್ ಲೀಗ್ ಪಂದ್ಯ ನಡೆಯುತ್ತಿದ್ದ ಮುಂಬೈನ ವರ್ಲಿಯ ಮಹಾನಗರ ಪಾಲಿಕೆಯ ಶಾಲೆಗೆ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News