ಮುಂದಿನ ವರ್ಷ ಭಾರತದಲ್ಲಿ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್

Update: 2019-09-13 17:09 GMT

ಹೊಸದಿಲ್ಲಿ, ಸೆ.13: ಮುಂದಿನ ವರ್ಷ ನವೆಂಬರ್ 2ರಿಂದ 21ರ ತನಕ 17 ವರ್ಷದೊಳಗಿನವರ ಫಿಫಾ ಮಹಿಳಾ ವಿಶ್ವಕಪ್ ಟೂರ್ನಮೆಂಟ್ ಭಾರತದ ಆತಿಥ್ಯದಲ್ಲಿ ನಡೆಯಲಿದೆ.

ಫಿಫಾ ಆಯೋಜಿತ ವಯೋಮಿತಿಯ ಟೂರ್ನಿಯು ಭಾರತದ ನಾಲ್ಕು ನಗರಗಳಲ್ಲಿ ನಡೆಯಲಿದೆ. ಕಳೆದ ತಿಂಗಳು ಭುವನೇಶ್ವರದ ಕಳಿಂಗ ಸ್ಟೇಡಿಯಂ ವಿಶ್ವಕಪ್ ಆತಿಥ್ಯವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿತ್ತು. ಇದಕ್ಕೆ ಫಿಫಾ ಮಾನ್ಯತೆ ಮಾತ್ರ ಬಾಕಿ ಇತ್ತು.

ಕೋಲ್ಕತಾ, ನವಿ ಮುಂಬೈ, ಗೋವಾ ಹಾಗೂ ಅಹ್ಮದಾಬಾದ್ ಇತರ ಮೂರು ಆತಿಥ್ಯ ನಗರಗಳಾಗುವ ರೇಸ್‌ನಲ್ಲಿವೆ. ಈ ವರ್ಷದ ಮಾರ್ಚ್‌ನಲ್ಲಿ ಭಾರತ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಆತಿಥ್ಯವಹಿಸಿಕೊಳ್ಳಲಿದೆ ಎಂದು ಫಿಫಾ ಅಧ್ಯಕ್ಷ ಇನ್‌ಫ್ಯಾಂಟಿನೊ ಘೋಷಿಸಿದ್ದರು.

ಸ್ಪೇನ್ ಹಾಲಿ ಚಾಂಪಿಯನ್ ತಂಡವಾಗಿದ್ದು, 2018ರಲ್ಲಿ ಪ್ರಶಸ್ತಿ ಜಯಿಸಿತ್ತು. ಟೂರ್ನಿಯ ಆತಿಥ್ಯವಹಿಸಿರುವ ಭಾರತ ಟೂರ್ನಿಗೆ ನೇರ ಅರ್ಹತೆ ಪಡೆದಿದೆ. ಥಾಯ್ಲೆಂಡ್‌ನಲ್ಲಿ ಸೆ.15ರಿಂದ 28ರ ತನಕ ನಡೆಯಲಿರುವ ಎಎಫ್‌ಸಿ ಅಂಡರ್-16 ಮಹಿಳಾ ಚಾಂಪಿಯನ್‌ಶಿಪ್‌ನ ಏಶ್ಯ ಅರ್ಹತಾ ಅಭಿಯಾನದಲ್ಲಿ ಪ್ರವೇಶ ಪಡೆದಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News