ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಫೈನಲ್‌ಗೆ ತಲುಪಿದ ಅಮಿತ್ ಐತಿಹಾಸಿಕ ಸಾಧನೆ

Update: 2019-09-20 11:41 GMT

ಎಕಟೆರಿನ್‌ಬರ್ಗ್(ರಶ್ಯ), ಸೆ.20: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ ಅಮಿತ್ ಪಾಂಘಾಲ್ ಐತಿಹಾಸಿಕ ಸಾಧನೆ ಮಾಡಿದರು.
ಶುಕ್ರವಾರ ನಡೆದ ಪುರುಷರ 52 ಕೆಜಿ ತೂಕ ವಿಭಾಗದ ಸೆಮಿ ಫೈನಲ್‌ನಲ್ಲಿ ಅಮಿತ್ ಕಝಖ್‌ಸ್ತಾನದ ಸಾಕೆನ್ ಬಿಬೊಸಿನೊವ್ ವಿರುದ್ಧ 3-2 ಅಂತರದಿಂದ ಜಯ ಸಾಧಿಸಿದರು. ಈ ಸಾಧನೆಯ ಮೂಲಕ ಮೊತ್ತ ಮೊದಲ ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿ ಚೊಚ್ಚಲ ಪ್ರಶಸ್ತಿಯತ್ತ ಹೆಜ್ಜೆ ಇಟ್ಟಿದ್ದಾರೆ.
ಅಮಿತ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿರುವ ಭಾರತದ ಮೊದಲ ಬಾಕ್ಸರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
 ಇದೇ ವೇಳೆ ಪುರುಷರ 63 ಕೆಜಿ ತೂಕ ವಿಭಾಗದ ಸೆಮಿ ಫೈನಲ್‌ನಲ್ಲಿ ಮುಗ್ಗರಿಸಿದ ಮನೀಶ್ ಕೌಶಿಕ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಮನೀಶ್ ಕ್ಯೂಬಾದ ಆ್ಯಂಡಿ ಗೊಮೆಝ್ ವಿರುದ್ಧ 0-5 ಅಂತರದಿಂದ ಸೋತಿದ್ದಾರೆ. ಈ ಮೂಲಕ ಫೈನಲ್‌ಗೆ ತಲುಪುವ ಅವಕಾಶ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News