ಸಾಗರಗಳು ವಿಪತ್ತುಗಳ ಸರಮಾಲೆಯನ್ನೇ ಹರಿಸಬಹುದು

Update: 2019-09-20 17:50 GMT

ಪ್ಯಾರಿಸ್, ಸೆ. 20: ಇಂಗಾಲದ ಡೈ ಆಕ್ಸೈಡ್ ಅನಿಲ ಬಿಡುಗಡೆಗೆ ಕಾರಣವಾಗುವ ಮಾನವ ಚಟುವಟಿಕೆಗಳಿಂದಾಗಿ ಹುಟ್ಟಿಕೊಂಡಿರುವ ಜಾಗತಿಕ ತಾಪಮಾನ ಮತ್ತು ಪರಿಸರ ಮಾಲಿನ್ಯವು ಭೂಮಿಯ ಸಾಗರಗಳು ಮತ್ತು ಶೀತಲೀಕೃತ ವಲಯಗಳಲ್ಲಿ ದಾಂಧಲೆಯೆಬ್ಬಿಸಿದೆ ಹಾಗೂ ಇದು ಜಾಗತಿಕ ಮಟ್ಟದಲ್ಲಿ ವಿಪತ್ತುಗಳನ್ನು ಸೃಷ್ಟಿಸಬಹುದಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ.

ಈ ವರದಿ ಮುಂದಿನ ವಾರ ಬಿಡುಗಡೆಗೊಳ್ಳಲಿದೆ.

ವರದಿಯನ್ನು ಅಂತಿಮಗೊಳಿಸಲು 195 ದೇಶಗಳ ರಾಜತಾಂತ್ರಿಕರು ಮತ್ತು ವಿಜ್ಞಾನಿಗಳು ಮೊನಾಕೊದಲ್ಲಿ ಶುಕ್ರವಾರದಿಂದ ಸಭೆ ಸೇರಿದ್ದಾರೆ. ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದಾಗಿ ಹಿಮನದಿಗಳು ಮರೆಯಾಗಬಹುದು, ಸಾಗರಗಳಲ್ಲಿ ಉಷ್ಣ ಅಲೆಗಳು ಹುಟ್ಟಿಕೊಳ್ಳಬಹುದು, ಸಾಗರಗಳ ಮಟ್ಟ ಏರಬಹುದು ಹಾಗೂ ಅಭೂತಪೂರ್ವ ಮಟ್ಟದಲ್ಲಿ ಅನಿವಾರ್ಯ ವಲಸೆ ಸಂಭವಿಸಬಹುದು ಎಂದು ವರದಿ ಎಚ್ಚರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News