ಜರ್ಮನಿ: ಪರಿಸರ ರಕ್ಷಣೆಗೆ 100 ಬಿಲಿಯ ಯುರೋ ಯೋಜನೆ

Update: 2019-09-20 17:53 GMT

ಬರ್ಲಿನ್, ಸೆ. 20: ಜರ್ಮನಿ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಸರಕಾರವು ಶುಕ್ರವಾರ ಜರ್ಮನಿಗಾಗಿ ವ್ಯಾಪಕ ಪರಿಸರ ಯೋಜನೆಯೊಂದನ್ನು ಅಂತಿಮಗೊಳಿಸಿದೆ ಎಂದು ಮೈತ್ರಿಕೂಟದ ಮೂಲವೊಂದು ತಿಳಿಸಿದೆ.

ಹೆಚ್ಚು ಪರಿಸರ ಸಂರಕ್ಷಣೆ ಬೇಕು ಎಂದು ಆಗ್ರಹಿಸಿ ಸಾವಿರಾರು ಮಂದಿ ಪರಿಸರ ಪರ ಕಾರ್ಯಕರ್ತರು ಮೆರವಣಿಗೆ ನಡೆಸುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ.

ಆಡಳಿತಾರೂಢ ಮೈತ್ರಿಕೂಟದ ಘಟಕ ಪಕ್ಷಗಳ ನಡುವಿನ ಮ್ಯಾರಥಾನ್ ಮಾತುಕತೆಯು ರಾತ್ರಿಯಿಡೀ ನಡೆಯಿತು. 18 ಗಂಟೆಗಳಿಗೂ ಹೆಚ್ಚು ಅವಧಿಯ ಮಾತುಕತೆಯ ಬಳಿಕ ಮೈತ್ರಿಕೂಟವು 100 ಬಿಲಿಯ ಯುರೋ (ಸುಮಾರು 7.82 ಲಕ್ಷ ಕೋಟಿ ರೂಪಾಯಿ) ಒಪ್ಪಂದವೊಂದಕ್ಕೆ ಬಂತು ಎಂದು ಮೂಲ ತಿಳಿಸಿದೆ. ಒಪ್ಪಂದವು ಹಲವು ಕ್ರಮಗಳನ್ನು ಹಾಗೂ ವಾರ್ಷಿಕ ನಿಗಾ ವ್ಯವಸ್ಥೆಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News