ಸಾವಿರಾರು ಸುಳ್ಳು ಸುದ್ದಿ ಖಾತೆಗಳು ಬಂದ್: ಟ್ವಿಟರ್

Update: 2019-09-20 17:55 GMT

ವಾಶಿಂಗ್ಟನ್, ಸೆ. 20: ಸುಳ್ಳು ಸುದ್ದಿಯನ್ನು ಹರಡುತ್ತಿರುವುದಕ್ಕಾಗಿ ವಿಶ್ವಾದ್ಯಂತ ಸಾವಿರಾರು ಖಾತೆಗಳನ್ನು ಮುಚ್ಚಿರುವುದಾಗಿ ಟ್ವಿಟರ್ ಶುಕ್ರವಾರ ಹೇಳಿದೆ.

ಈ ಕ್ರಮದಿಂದಾಗಿ ಈಜಿಪ್ಟ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಹುಟ್ಟಿಕೊಳ್ಳುವ ಹಾಗೂ ಕತರ್ ಮತ್ತು ಯೆಮನ್‌ಗಳನ್ನು ಗುರಿಯಾಗಿಸುವ ಖಾತೆಗಳ ಮೇಲೆ ಹೆಚ್ಚಿನ ಪರಿಣಾಮವಾಗಿವೆ. ಈ ಖಾತೆಗಳು ಸೌದಿ ಅರೇಬಿಯದ ಪರವಾಗಿರುವ ಸಂದೇಶಗಳನ್ನು ಹರಡುತ್ತಿವೆಯೆನ್ನಲಾಗಿದೆ.

ಅದೂ ಅಲ್ಲದೆ, ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಧರಣಿಗಳನ್ನು ನಡೆಸುತ್ತಿರುವ ಕಾರ್ಯಕರ್ತರಲ್ಲಿ ಒಡಕುಂಟು ಮಾಡುವ ಉದ್ದೇಶ ಹೊಂದಿರುವ ಚೀನೀ ಖಾತೆಗಳನ್ನೂ ಮುಚ್ಚಲಾಗಿದೆ ಎಂದು ಟ್ವಿಟರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News