ಸಾವಿರಾರು ಆ್ಯಪ್‌ಗಳನ್ನು ಸ್ಥಗಿತಗೊಳಿಸಿದ ಫೇಸ್‌ ಬುಕ್

Update: 2019-09-21 17:08 GMT

 ಸ್ಯಾನ್‌ಫ್ರಾನ್ಸಿಸ್ಕೊ, ಸೆ. 21: ಖಾಸಗಿತನ ನೀತಿಗಳ ಪರಿಶೀಲನೆಯ ಫಲಿತಾಂಶವಾಗಿ ಫೇಸ್‌ಬುಕ್‌ನ ಸಾವಿರಾರು ಆ್ಯಪ್‌ಗಳು ಅಮಾನತುಗೊಂಡಿವೆ ಎಂದು ಫೇಸ್‌ಬುಕ್ ಶುಕ್ರವಾರ ಹೇಳಿದೆ.

ಕೇಂಬ್ರಿಜ್ ಅನಾಲಿಟಿಕಾ ಹಗರಣದ ಬಳಿಕ ಖಾಸಗಿತನದ ನೀತಿಗಳನ್ನು ಫೇಸ್‌ಬುಕ್ ಅಳವಡಿಸಿಕೊಂಡಿತ್ತು.

ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಜ್ ಅನಾಲಿಟಿಕಾವು ವಕೀಲರು, ಬಾಹ್ಯ ತನಿಖಾಧಿಕಾರಿಗಳು, ದತ್ತಾಂಶ ವಿಜ್ಞಾನಿಗಳು, ಇಂಜಿನಿಯರ್‌ಗಳು, ನೀತಿ ಪರಿಣತರು ಮತ್ತು ಇತರರು ಸೇರಿದಂತೆ ಕೋಟಿಗಟ್ಟಳೆ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕಳ್ಳತನ ಮಾಡಿತ್ತು ಎನ್ನುವುದು ಬಹಿರಂಗಗೊಂಡ ಬಳಿಕ, 2018ರಲ್ಲಿ ಖಾಸಗಿತನ ತಪಾಸಣೆ ಕಾರ್ಯಕ್ರಮವನ್ನು ಫೇಸ್‌ಬುಕ್ ಆರಂಭಿಸಿದೆ.

‘‘ಆ್ಯಪ್‌ಗಳನ್ನು ಅಮಾನತು ಮಾಡಿರುವುದೆಂದರೆ, ಅವುಗಳು ಜನರಿಗೆ ಬೆದರಿಕೆಯಾಗಿತ್ತು ಎಂದಲ್ಲ’’ ಎಂದು ಫೇಸ್‌ಬುಕ್ ಉಪಾಧ್ಯಕ್ಷ ಇಮ್ ಆರ್ಚಿ ಬಾಂಗ್ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ‘‘ಕೆಲವರು ಮಾಹಿತಿ ಕೋರಿ ನಾವು ಕಳುಹಿಸಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News