ಚೀನಾ ಸರಕುಗಳ ಮೇಲಿನ ಆಮದು ತೆರಿಗೆ ತೆರವುಗೊಳಿಸಿದ ಟ್ರಂಪ್

Update: 2019-09-21 17:16 GMT

ವಾಶಿಂಗ್ಟನ್, ಸೆ. 21: ನೂರಾರು ಚೀನಿ ಉತ್ಪನ್ನಗಳ ಮೇಲೆ ತಾನು ಕಳೆದ ವರ್ಷ ವಿಧಿಸಿರುವ ಆಮದು ತೆರಿಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ತಾತ್ಕಾಲಿಕವಾಗಿ ತೆರವುಗೊಳಿಸಿದ್ದಾರೆ.

ಈ ಮೂಲಕ, ಮುಂದಿನ ತಿಂಗಳು ಅಮೆರಿಕ ಮತ್ತು ಚೀನಾಗಳ ನಡುವೆ ನಡೆಯಲಿರುವ ವ್ಯಾಪಾರ ಮಾತುಕತೆಗೆ ಮುನ್ನ ವ್ಯಾಪಾರ ಸಂಘರ್ಷ ಕುರಿತ ತನ್ನ ನಿಲುವನ್ನು ಮೆದುಗೊಳಿಸಿದ್ದಾರೆ.

 ಟ್ರಂಪ್‌ರ ಈ ನಿರ್ಧಾರದ ಫಲವಾಗಿ ಶೇರು ಮಾರುಕಟ್ಟೆಗಳು ಚೇತರಿಸಿಕೊಂಡಿವೆ. ಎರಡನೇ ವರ್ಷಕ್ಕೆ ಕಾಲಿಟ್ಟಿರುವ ವ್ಯಾಪಾರ ಸಮರದಿಂದಾಗಿ ಶೇರು ಮಾರುಕಟ್ಟೆಗಳು ಉಸಿರುಗಟ್ಟಿದ್ದವು.

 ಅಮೆರಿಕ ಮತ್ತು ಚೀನಾಗಳ ನಡುವಿನ ವ್ಯಾಪಾರ ಮಾತುಕತೆಗಳು ವಾಶಿಂಗ್ಟನ್‌ನಲ್ಲಿ ಮುಂದಿನ ತಿಂಗಳು ಪುನರಾರಂಭಗೊಳ್ಳಲಿವೆ. ಚೀನಾದ ಉತ್ಪನ್ನಗಳ ಮೇಲಿನ ಹೆಚ್ಚುವರಿ ತೆರಿಗೆಯನ್ನು ಟ್ರಂಪ್ ಮುಂದೂಡಿರುವುದು ಅಥವಾ ತೆರಿಗೆಯನ್ನು ರದ್ದುಪಡಿಸಿರುವುದು ಆಗಸ್ಟ್ ಬಳಿಕ ಇದು ಮೂರನೇ ಬಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News