ಕೊಹ್ಲಿ ಪಡೆಯ ಬ್ಯಾಟಿಂಗ್ ವೈಫಲ್ಯ: 20 ಓವರ್‌ಗಳಲ್ಲಿ 134ರನ್

Update: 2019-09-22 15:38 GMT

ಬೆಂಗಳೂರು, ಸೆ.22: ದಕ್ಷಿಣ ಆಫ್ರಿಕ ವಿರುದ್ಧ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 134ರನ್ ಗಳಿಸಿದೆ.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತದ ಲೆಕ್ಕಚಾರ ತಲೆಕೆಳಗಾಗಿದೆ. ಆಫ್ರಿಕಾದ ಬೌಲರ್‌ಗಳು ಕಡಿಮೆ ಮೊತ್ತಕ್ಕೆ ಟೀಮ್ ಇಂಡಿಯಾವನ್ನು ಕಟ್ಟಿ ಹಾಕಿದ್ದಾರೆ.

 ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್36 ರನ್ ಸೇರಿಸಿರುವುದು ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಇವರನ್ನು ಹೊರತುಪಡಿಸಿದರೆ ವಿಕೆಟ್ ಕೀಪರ್ ರಿಷಭ್ ಪಂತ್(19), ಹಾರ್ದಿಕ್ ಪಾಂಡ್ಯ(14) ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ(19) ಎರಡಂಕೆಯ ಸ್ಕೋರ್ ಜಮೆ ಮಾಡಿದರು.

ಆಫ್ರಿಕಾದ ಕಾಗಿಸೊ ರಬಾಡ (39ಕ್ಕೆ 3), ಬಿಜೊರ್ನ್ ಫಾರ್ಚೂನ್(19ಕ್ಕೆ 2), ಬೆಯುರನ್ ಹೆನ್ರಿಕ್ಸ್(14ಕ್ಕೆ2), ಟಾಬ್ರೈಝ್ ಶಂಸಿ (23ಕ್ಕೆ 1) ದಾಳಿಗೆ ಸಿಲುಕಿದ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಮೊತ್ತದ ಸವಾಲನ್ನು ಸೇರಿಸಲು ಸಾಧ್ಯವಾಗಲಿಲ್ಲ.

  ನಾಯಕ ವಿರಾಟ್ ಕೊಹ್ಲಿ(9), ಉಪನಾಯಕ ರೋಹಿತ್ ಶರ್ಮಾ(9), ಶ್ರೇಯಸ್ ಅಯ್ಯರ್(5), ಕೃನಾಲ್ ಪಾಂಡ್ಯ(4), ವಾಶಿಂಗ್ಟನ್ ಸುಂದರ್(4) ಒಂದಂಕಿಯ ಕೊಡುಗೆ ನೀಡಲಷ್ಟೇ ಶಕ್ತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News