ಶಾಲೆಯ ಕಟ್ಟಡ ಕುಸಿದು 7 ಮಕ್ಕಳು ಮೃತ್ಯು

Update: 2019-09-23 18:42 GMT

ನೈರೋಬಿ, ಸೆ. 23: ಕೆನ್ಯ ದೇಶದ ರಾಜಧಾನಿ ನೈರೋಬಿಯಲ್ಲಿ ಸೋಮವಾರ ಶಾಲಾ ತರಗತಿಯೊಂದು ಕುಸಿದು ಏಳು ಮಕ್ಕಳು ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 57 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಕ್ಷಣಾ ಸಿಬ್ಬಂದಿ ಅವಶೇಷಗಳ ಅಡಿಯಲ್ಲಿ ಬದುಕುಳಿದವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

‘‘ಚಿಕಿತ್ಸೆಗಾಗಿ 57 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ದುರಂತದಲ್ಲಿ ಏಳು ಮಕ್ಕಳು ಮೃತಪಟ್ಟಿದ್ದಾರೆ ಎನ್ನುವುದನ್ನೂ ನಾನು ಖಚಿತಪಡಿಸುತ್ತೇನೆ’’ ಎಂದು ಸರಕಾರಿ ವಕ್ತಾರ ಸೈರಸ್ ಒಗುನ ತಿಳಿಸಿದರು.

64 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಳೀಕ ಕೆನ್ಯಟ ನ್ಯಾಶನಲ್ ಆಸ್ಪತ್ರೆ ಟ್ವಿಟರ್ ‌ನಲ್ಲಿ ಹೇಳಿದೆ.

ಕಟ್ಟಡದ ಮೊದಲ ಮಹಡಿ ಕುಸಿಯಿತು ಹಾಗೂ ಕೆಳಗಿದ್ದ ಮಕ್ಕಳು ಸಿಕ್ಕಿಹಾಕಿಕೊಂಡರು ಎಂದು ಸ್ಥಳೀಯ ಚುನಾವಣಾ ಪ್ರತಿನಿಧಿಯೊಬ್ಬರು ತಿಳಿಸಿದರು.

ಕಟ್ಟಡ ಕುಸಿತಕ್ಕೆ ಕಾರಣ ಗೊತ್ತಾಗಿಲ್ಲ. ಆದರೆ, ನೈರೋಬಿಯಲ್ಲಿ 30ರಿಂದ 40 ಸಾವಿರ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಅವುಗಳು ಕುಸಿಯುತ ಹಂತದಲ್ಲಿವೆ ಎಂದು ಹೇಳಲಾಗಿದೆ.

ಮೂರು ವರ್ಷಗಳ ಹಿಂದೆ ಭಾರೀ ಮಳೆಯಿಂದಾಗಿ ಆರು ಮಹಡಿಗಳ ವಾಸ್ತವ್ಯ ಕಟ್ಟಡವೊಂದು ನೈರೋಬಿಯಲ್ಲಿ ಕುಸಿದಿತ್ತು. ಘಟನೆಯಲ್ಲಿ 51 ಮಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News