×
Ad

ಕೊಹ್ಲಿ, ಧವನ್‌ಗೆ ಭಡ್ತಿ

Update: 2019-09-25 23:16 IST

ದುಬೈ, ಸೆ.25: ಐಸಿಸಿ ಟ್ವೆಂಟಿ-20 ಕ್ರಿಕೆಟ್ ಆಟಗಾರರ ರ‍್ಯಾಂಕಿಂಗ್ ಪಟ್ಟಿ ಬುಧವಾರ ಪ್ರಕಟಗೊಂಡಿದ್ದು, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಎಡಗೈ ದಾಂಡಿಗ ಶಿಖರ್ ಧವನ್ ಭಡ್ತಿ ಪಡೆದಿದ್ದಾರೆ.

 ದಕ್ಷಿಣ ಆಫಿಕಾ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಕೊಹ್ಲಿ ಔಟಾಗದೆ 72 ರನ್ ಸಿಡಿಸಿದ್ದರು. ಕೊಹ್ಲಿ ಅರ್ಧಶತಕದ ನೆರವಿನಲ್ಲಿ ರ್ಯಾಂಕಿಂಗ್‌ನಲ್ಲಿ 11ನೇ ಸ್ಥಾನಕ್ಕೆ ಮತ್ತು ಧವನ್ 13ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಧವನ್ 40 ಮತ್ತು 36 ರನ್ ಗಳಿಸಿದ್ದರು.

ಈ ಸರಣಿಯಲ್ಲಿ ಉಭಯ ತಂಡಗಳು ತಲಾ 1 ಪಂದ್ಯಗಳಲ್ಲಿ ಜಯ ಗಳಿಸುವುದರೊಂದಿಗೆ ಸರಣಿ 1-1 ಡ್ರಾಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News