×
Ad

ಕಶ್ಯಪ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Update: 2019-09-26 22:37 IST

 ಇಂಚಿಯೊನ್, ಸೆ.26: ಭಾರತದ ಶಟ್ಲರ್ ಪಾರುಪಲ್ಲಿ ಕಶ್ಯಪ್ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಗುರುವಾರ ಇಲ್ಲಿ 56 ನಿಮಿಷಗಳಲ್ಲಿ ಕೊನೆಗೊಂಡ ಎರಡನೇ ಸುತ್ತಿನ ಪಂದ್ಯದಲ್ಲಿ ಕಶ್ಯಪ್ ಮಲೇಶ್ಯದ ಡರೆನ್ ಲೀವ್ ವಿರುದ್ಧ 21-17, 11-21, 21-12 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

  ಹೈದರಾಬಾದ್ ಆಟಗಾರ ಕಶ್ಯಪ್ ಮುಂದಿನ ಸುತ್ತಿನಲ್ಲಿ 8ನೇ ಶ್ರೇಯಾಂಕದ ಇಂಡೋನೇಶ್ಯದ ಅಂಥೋನಿ ಸಿನಿಸುಕ ಜಿಂಟಿಂಗ್ ಅಥವಾ ಡೆನ್ಮಾರ್ಕ್‌ನ ಜಾನ್ ಒ’ಜಾರ್ಜೆನ್ಸನ್‌ರನ್ನು ಎದುರಿಸಲಿದ್ದಾರೆ. ಬಿಡಬ್ಲುಎಫ್ ವರ್ಲ್ಡ್ ಟೂರ್ 500 ಟೂರ್ನಮೆಂಟ್‌ನಲ್ಲಿ ಸ್ಪರ್ಧೆಯಲ್ಲಿರುವ ಏಕೈಕ ಆಟಗಾರ ಕಶ್ಯಪ್. ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಹಾಗೂ ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ತಮ್ಮ ಹೋರಾಟ ಕೊನೆಗೊಳಿಸಿದ್ದರು. ಸಿಂಧು ಅಮೆರಿಕದ ಬೆವೆನ್ ಝಾಂಗ್ ವಿರುದ್ಧ 7-21, 24-22, 15-21 ಅಂತರದಿಂದ ಶರಣಾಗಿದ್ದರು. ಸೈನಾ ನೆಹ್ವಾಲ್ ದ.ಕೊರಿಯಾದ ಕಿಮ್ ಯುನ್ ವಿರುದ್ಧ 21-19, 18-21, 1-8 ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ನಿವೃತ್ತಿಯಾಗಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಬಿ.ಸಾಯಿ ಪ್ರಣೀತ್ ಟೂರ್ನಮೆಂಟ್‌ನಿಂದ ಬೇಗನೆ ನಿರ್ಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News