×
Ad

ಹೊಸ ಆಯ್ಕೆಗಾರರ ಹುಡುಕಾಟದಲ್ಲಿ ಆಸ್ಟ್ರೇಲಿಯ

Update: 2019-09-26 23:09 IST

ಮೆಲ್ಬೋರ್ನ್, ಸೆ.26: ಮಾಜಿ ನಾಯಕ ಗ್ರೆಗ್ ಚಾಪೆಲ್ ಕ್ರಿಕೆಟ್ ಆಸ್ಟ್ರೇಲಿಯದ ರಾಷ್ಟ್ರೀಯ ಟ್ಯಾಲೆಂಟ್ ಮ್ಯಾನೇಜರ್ ಹಾಗೂ ಆಯ್ಕೆಗಾರ ಹುದ್ದೆಯಿಂದ ಈ ತಿಂಗಳಾಂತ್ಯದಲ್ಲಿ ಕೆಳಗಿಳಿಯಲಿದ್ದಾರೆ ಎಂದು ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಗುರುವಾರ ತಿಳಿಸಿದೆ. ಆಸ್ಟ್ರೇಲಿಯದ ಪರ 87 ಟೆಸ್ಟ್ ಹಾಗೂ 74 ಏಕದಿನ ಪಂದ್ಯಗಳನ್ನು ಆಡಿರುವ ಚಾಪೆಲ್ ಕಳೆದ 9 ವರ್ಷಗಳಿಂದ ಕ್ರಿಕೆಟ್ ಆಸ್ಟ್ರೇಲಿಯದ ಟ್ಯಾಲೆಂಟ್ ಮ್ಯಾನೇಜರ್ ಆಗಿದ್ದರು. ಇತ್ತೀಚೆಗಿನ ದಿನಗಳಲ್ಲಿ ಆಯ್ಕೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. 71ರ ಹರೆಯದ ಚಾಪೆಲ್‌ರಿಂದ ತೆರವಾಗಲಿರುವ ಸ್ಥಾನಕ್ಕೆ ನೂತನ ಆಯ್ಕೆಗಾರರನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News