×
Ad

9ನೇ ಚಿನ್ನ ಬಾಚಿಕೊಂಡ ಭಾರತ

Update: 2019-09-26 23:13 IST

ಬೆಂಗಳೂರು, ಸೆ.26: ಹತ್ತನೇ ಆವೃತ್ತಿಯ ಏಶ್ಯನ್ ವಯೋಮಿತಿ ಈಜು ಚಾಂಪಿಯನ್‌ಶಿಪ್‌ನಲ್ಲಿ ಶ್ರೀಹರಿ ನಟರಾಜ್, ಸಾಜನ್ ಪ್ರಕಾಶ್, ಲಿಖಿತ್ ಎಸ್‌ಪಿ ಹಾಗೂ ವೀರ್ ಧವಳ್ ಖಾಡೆ ಅವರನ್ನೊಳಗೊಂಡ ಭಾರತದ 4x100 ಮೀ. ಮಿಡ್ಲೆ ರಿಲೇ ತಂಡ ಭಾರತಕ್ಕೆ 9ನೇ ಚಿನ್ನದ ಪದಕ ಗೆದ್ದುಕೊಟ್ಟಿದೆ.

  ಪಡುಕೋಣೆ-ದ್ರಾವಿಡ್ ಸೆಂಟರ್ ಆಫ್ ಸ್ಪೋಟ್ಸ್ ಎಕ್ಸಲೆನ್ಸಿಯಲ್ಲಿ ಬುಧವಾರ ನಡೆದ ನಡೆದ ಸ್ಪರ್ಧೆಯಲ್ಲಿ ಭಾರತದ ತಂಡ 3:46.49 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆಯಿತು. ಥಾಯ್ಲೆಂಡ್(3:48.89ಸೆ.) ಹಾಗೂ ಹಾಂಕಾಂಗ್(3:53.99 ಸೆ.)ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿವೆೆ.

ಖಾಡೆ ಬುಧವಾರ 50 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದರು. 53 ಸೆಕೆಂಡ್‌ನಲ್ಲಿ ಗುರಿ ತಲುಪಿದ ಖಾಡೆ ಮೊದಲ ಸ್ಥಾನ ಪಡೆದರೆ, ಥಾಯ್ಲೆಂಡ್‌ನ ಟಾರಿಟ್ ಥೊಂಗ್‌ಚುಂಸಿನ್(52.29 ಸೆ.) ಹಾಗೂ ಹಾಂಕಾಂಗ್‌ನ ಫುಂಗ್ ಚುಂಗ್ ಹೋ(53.85 ಸೆ.)ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News