×
Ad

ರೆಡ್ ಬಾಲ್ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆ ನಿರ್ಗಮಿಸಿದ ರೋಹಿತ್

Update: 2019-09-28 23:18 IST

     ವಿಝಿಯನಗರಂ. ಸೆ.28: ಇಲ್ಲಿ ನಡೆದ ಭಾರತದ ಮಂಡಳಿ ಅಧ್ಯಕ್ಷ ಇಲೆವೆನ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ನಡೆದ ಮೂರು ದಿನಗಳ ಅಭ್ಯಾಸದ ಪಂದ್ಯದ 3ನೇ ಹಾಗೂ ಅಂತಿಮ ದಿನವಾಗಿರುವ ಶನಿವಾರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಖಾತೆ ತೆರೆಯದೆ ನಿರ್ಗಮಿಸಿದರು. ಮಾಯಾಂಕ್ ಅಗರ್ವಾಲ್ ಅವರೊಂದಿಗೆ ಬ್ಯಾಟಿಂಗ್ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಅವರು ಎದುರಿಸಿದ ಎರಡನೇ ಎಸೆತದಲ್ಲಿ ಔಟಾಗಿ ನಿರ್ಗಮಿಸಿದರು ವೆರ್ನಾನ್ ಫಿಲ್ಯಾಂಡರ್‌ಗೆ ಎಸೆತದಲ್ಲಿ ಕ್ಲಾಸೆನ್‌ಗೆ ಕ್ಯಾಚ್ ನೀಡಿದರು.

   ಅಕ್ಟೋಬರ್ 2ರಂದು ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಮಾಯಾಂಕ್ ಅಗರ್ವಾಲ್ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಇದಕ್ಕೆ ಪೂರ್ವ ತಯಾರಿಯಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟಾಗಿ ನಿರಾಸೆಗೊಂಡರು.

    ಅಭ್ಯಾಸ ಪಂದ್ಯದಲ್ಲಿ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ ಅವರು ಫಾರ್ಮ್ ಕಳೆದುಕೊಂಡಿರುವ ಲೋಕೇಶ್ ರಾಹುಲ್ ಬದಲಿಗೆ ಟೆಸ್ಟ್ ತಂಡದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಸ್ಥಾನದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

   ನಾವು ರೋಹಿತ್ ಶರ್ಮಾರ ಬ್ಯಾಟಿಂಗ್‌ನಲ್ಲಿ ವಿಶ್ವಾಸವಿರಿಸಿದ್ದೇವೆ. ಅವರಿಗೆ ಹೊಂದಿಕೊಳ್ಳಲು ಕಲಾವಕಾಶ ನೀಡಲು ಬಯಸಿದ್ದೇವೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.

ಸ್ವಾಭಾವಿಕವಾಗಿ, ಅಭ್ಯಾಸದ ಪಂದ್ಯದಲ್ಲಿ ರೋಹಿತ್ ಶರ್ಮಾ ಏನು ಮಾಡಿಯಾರು ? ಎಂಬ ಕುತೂಹಲ ಇತ್ತು. ಆದರೆ ಅವರು ಮೊದಲ ಅವಕಾಶವನ್ನು ಕೈ ಚೆಲ್ಲಿದರು. *ಮಂಡಳಿ ಅಧ್ಯಕ್ಷರ ಇಲೆವೆನ್ 265/8: ಮಂಡಳಿ ಅಧ್ಯಕ್ಷರ ಇಲೆವೆನ್ ತಂಡ ಮೊದಲ ಇನಿಂಗ್ಸ್‌ನಲ್ಲಿ 64 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 265 ರನ್ ಗಳಿಸಿತು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.

ಪ್ರಿಯಾಂಕ್ ಪಾಂಚಾಲ್ (60) ಮತ್ತು ಸಿದ್ದೇಶ್ ಲಾಡ್(ಔಟಾಗದೆ 52) ಮತ್ತು ಶ್ರೀಕರ್ ಭರತ್ (71) ಅರ್ಧಶತಕ ಗಳಿಸಿ ಗಮನ ಸೆಳೆದರು.

ಮಾಯಾಂಕ್ ಅಗರ್ವಾಲ್ 39 ರನ್, ಅಭಿಮನ್ಯು ಈಶ್ವರನ್ 13ರನ್, ಕರುಣ್ ನಾಯರ್ 19 ರನ್, ಜಲಜ್ ಸಕ್ಸೇನಾ 2 ರನ್ ಗಳಿಸಿ ಔಟಾದರು. ಆಫ್ರಿಕಾ ತಂಡದ ಕೇಶವ ಮಹಾರಾಜ್ 35ಕ್ಕೆ 3, ವೆರ್ನಾಲ ಫಿಲ್ಯಾಂಡರ್ 27ಕ್ಕೆ 2, ಕಾಗಿಸೊ ರಬಾಡ, ಡಾನೆ ಪೀಡ್ , ಸೆನುರಾನ್ ಮುತ್ತುಸ್ವಾಮಿ ತಲಾ 1 ವಿಕೆಟ್ ಪಡೆದರು. *ಆಫ್ರಿಕಾ 279/6 ಡಿಕ್ಲೇರ್: ಅಭ್ಯಾಸ ಪಂದ್ಯದ ಮೊದಲ ದಿನ ಮಳೆಗಾಹುತಿಯಾಗಿತ್ತು. ಎರಡನೇ ದಿನ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 199 ರನ್ ಗಳಿಸಿತ್ತು. ಮರ್ಕರಮ್ ಭಾರತ ಪ್ರವಾಸದಲ್ಲಿ ಎರಡನೇ ಶತಕ ದಾಖಲಿಸಿದ್ದರು. ದಿನದಾಟದಂತ್ಯಕ್ಕೆ ತೆಂಬಾ ಬವುಮಾ 55ರನ್(92ಎ, 9ಬೌ) ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಇಂದು ಆಟ ಮುಂದುವರಿಸಿದ ಆಫ್ರಿಕ 6 ಕ್ಕೆ 279 ರನ್ ಗಳಿಸಿ ಘೋಷಿಸಿತು. ತೆೆಂಬಾ ಬವುಮಾ ಅಜೇಯ 87 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು. ಆಲ್ ರೌಂಡರ್ ವೆರ್ನಾನ್ ಫಿಲಾಂಡರ್ 49 ಎಸೆತಗಳಲ್ಲಿ 48 ರನ್ ಗಳಿಸಿದರು. ಆರ್ಮ್ ಸ್ಪಿನ್ನರ್ ಧರ್ಮೇಂದ್ರಸಿಂಹ ಜಡೇಜಾ 66ಕ್ಕೆ 3 ವಿಕೆಟ್, ಉಮೇಶ ಯಾದವ್ ಮತ್ತು ಇಶಾನ್ ಪೊರೆಲ್ ತಲಾ 1 ವಿಕೆಟ್ ಪಡೆದರು. */*/*/

ಸಂಕ್ಷಿಪ್ತ ಸ್ಕೋರ್ ವಿವರ

► ದ.ಆಫ್ರಿಕಾ 64 ಓವರ್‌ಗಳಲ್ಲಿ 279/6( ಮರ್ಕರಮ್ ಗಾಯಗೊಂಡು ನಿವೃತ್ತಿ 100, ಬವುಮಾ ಔಟಾಗದೆ 85,ಫಿಲ್ಯಾಂಡರ್ 48, ಹಂಝಾ 22; ಡಿ.ಜಡೇಜ 66ಕ್ಕೆ 3,)

► ಮಂಡಳಿ ಅಧ್ಯಕ್ಷರ ಇಲೆವೆನ್ 64 ಓವರ್‌ಗಳಲ್ಲಿ 265/8(ಪಾಂಚಾಲ್ 60, ಸಿದ್ದೇಶ್ ಲಾಡ್‌ಔಟಾಗದೆ 52, ಶ್ರೀಕರ್ ಭರತ್ 71, ಮಾಯಾಂಕ್ ಅಗರ್ವಾಲ್ 39 ;ಕೇಶವ್ ಮಹಾರಾಜ್ 35ಕ್ಕೆ 3)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News