ವರ್ಲ್ಡ್ ಚಾಂಪಿಯನ್‌ಶಿಪ್‌ಗೆ ಸರಿತಾ ದೇವಿ ತಯಾರಿ
ಹೊಸದಿಲ್ಲಿ, ಸೆ.28: ಭಾರತದ ಮಹಿಳಾ ಬಾಕ್ಸಿಂಗ್ ಪಟು ಸರಿತಾ ದೇವಿ ಅವರು ರಶ್ಯದಲ್ಲಿ ನಡೆಯಲಿರುವ ಮುಂಬರುವ ಮಹಿಳೆಯರ ಬಾಕ್ಸಿಂಗ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಪದಕದ ಬೇಟೆಗೆ ತಯಾರಿ ನಡೆಸುತ್ತಿದ್ದಾರೆ.
ಉಡಾನ್ ಉಡೆಯಲ್ಲಿ ನಡೆಯುವ ವಿಶ್ವಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಅವರು ಚಿನ್ನ ಅಥವಾ ಬೆಳ್ಳಿ ಜಯಿಸಿದರೆ ವೂಹಾನ್‌ನಲ್ಲಿ ನಡೆಯಲಿರುವ ಪ್ರಥಮ ಒಲಿಂಪಿಕ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅವಕಾಶ ಪಡೆಯುತ್ತಾರೆ. ಇದರಲ್ಲಿ ಅವರು ಜಯ ಗಳಿಸಿದರೆ ಅವರಿಗೆ ಮುಂಬರುವ ಟೋಕಿಯೊ ಒಲಿಂಪಿಕ್‌ಗೆ ನೇರ ಪ್ರವೇಶ ಪಡೆಯಲು ಸಾಧ್ಯ. ಹೀಗಾದರೆ ಅವರು ಭಾರತದಲ್ಲಿ ನಡೆಯಲಿರುವ ಆಯ್ಕೆ ಟ್ರಯಲ್ಸ್‌ಗಳಲ್ಲಿ ಭಾಗವಹಿಸಬೇಕಾಗಿಲ್ಲ.
ಈ ಕಾರಣದಿಂದಾಗಿ ಸರಿತಾ ದೇವಿ ವಿಶ್ವಚಾಂಪಿಯನ್‌ಶಿಪ್‌ನ ಮೇಲೆ ಗಮನವನ್ನು ಕೇಂದ್ರಕರಿಸಿದ್ದಾರೆ. 37ರ ಹರೆಯದ ಸರಿತಾ ದೇವಿ ಅವರ ಪಾಲಿಗೆ ವಿಶ್ವಚಾಂಪಿಯನ್‌ಶಿಪ್ ಮತ್ತು ಒಲಿಂಪಿಕ್ ಬಳಿಕ ಬಾಕ್ಸಿಂಗ್‌ನಿಂದ ದೂರ ಸರಿಯುವ ಸಾಧ್ಯತೆ ಇದೆ. ‘‘ ನಾಣು ಈ ವರೆಗೆ ನಿವೃತ್ತಿಯ ಬಗ್ಗೆ ಯೋಚಿಸಲ್ಲ. ಆದರೆ ನನ್ನ ಪಾಲಿಗೆ ವರ್ಲ್ಡ್ ಚಾಂಪಿಯನ್‌ಶಿಪ್ ಮತ್ತು ಒಲಿಂಪಿಕ್ಸ್ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕೊನೆಯ ಸ್ಪರ್ಧೆಯಾಗಬಹುದು ’’ ಎಂದು ಸರಿತಾ ಹೇಳಿದ್ದಾರೆ.