ಸ್ಮಿತ್, ಕೊಹ್ಲಿ ದಾಖಲೆ ಮುರಿದ ನೇಪಾಳದ ನಾಯಕ ಪಾರಸ್ ಖಡ್ಕಾ

Update: 2019-09-29 11:31 GMT

ಸಿಂಗಾಪುರ, ಸೆ.29: ನೇಪಾಳ ನಾಯಕ ಪಾರಸ್ ಖಡ್ಕಾ ಅವರು ಸಿಂಗಾಪುರ ವಿರುದ್ಧ ಟ್ವೆಂಟಿ-20 ಪಂದ್ಯದಲ್ಲಿ ಚೊಚ್ಚಲ ವೇಗದ ಶತಕ ದಾಖಲಿಸುವ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ಸ್ಮಿತ್ ದಾಖಲೆ ಮುರಿದಿದ್ದಾರೆ. 

ಶನಿವಾರ ಸಿಂಗಾಪುರದ ಇಂಡಿಯನ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾರಸ್ ಔಟಾಗದೆ 106ರನ್ (52ಎ, 7ಬೌ,9ಸಿ) ಗಳಿಸಿದರು. ಅವರ ಶತಕದ ನೆರವಿನಲ್ಲಿ ನೇಪಾಳ ತಂಡ ಸಿಂಗಾಪುರ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

ಪಾರಸ್ ನೇಪಾಲದ ಪರ ಶತಕ ದಾಖಲಿಸಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಸವಾಲನ್ನು ಬೆನ್ನಟ್ಟುವ ವೇಳೆ ಶತಕ ದಾಖಲಿಸಿದ ಮೊದಲ ನಾಯಕ ಎಂಬ ದಾಖಲೆ ಬರೆದಿದ್ದಾರೆ. ಪಾರಸ್ ಖಡ್ಕಾ 49 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು.

ಏಶ್ಯದ ಬ್ಯಾಟ್ಸ್ ಮನ್ ಗಳ ಪೈಕಿ ಪಾರಸ್ ವೇಗದ ಶತಕ ದಾಖಲಿಸಿದ ನಾಲ್ಕನೇ ಬ್ಯಾಟ್ಸ್ ಮನ್ ಎಂಬ ಖ್ಯಾತಿ ಗಳಿಸಿದ್ದಾರೆ. ಮೂರು ರಾಷ್ಟ್ರಗಳ ತ್ರಿಕೋನ ಸರಣಿಯ ರಡನೇ ಪಂದ್ಯದಲ್ಲಿ ಗೆಲುವಿಗೆ ಸಿಂಗಾಪುರ ವಿರುದ್ಧ 152 ರನ್ ಗಳ ಸವಾಲನ್ನು ಪಡೆದ ನೇಪಾಳ ತಂಡ ನ್ನೂ 24 ಎಸೆತಗಳು ಬಾಕಿ ಇರುವಾಗಲೇ ನೇಪಾಳ ಗೆಲುವಿನ ದಡ ತಲುಪಿತು.

ಸರಣಿಯಲ್ಲಿ ನೇಪಾಳ ಮೊದಲ ಜಯ ಗಳಿಸಿದೆ. ಮೊದಲ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಸೋಲು ಅನುಭವಿಸಿತ್ತು.

ಪಾರಸ್ ಜೊತೆ ಇನಿಂಗ್ಸ್ ಆರಂಭಿಸಿದ ನೇಪಾಳದ ಆರಂಭಿಕ ದಾಂಡಿಗ ಇಶಾನ್ ಪಾಂಡೆ ಕೇವಲ 5 ರನ್ ಗಳಿಸಿ ಜಾನಕ್ ಪ್ರಕಾಶ್ ಎಸೆತದಲ್ಲಿ ಎಲ್ ಬಿಡಬ್ಲ್ಯು ಬಲೆಗೆ ಬೀಳಿಸಿದರು. ಬಳಿಕ ಆರಿಫ್ ಶೇಖ್ ಪಾರಸ್ ಗೆ ಜೊತೆಯಾದರು. ಇವರು ಮುರಿಯದ ಜೊತೆಯಾಟದಲ್ಲಿ 145 ರನ್ ಸೇರಿಸಿದರು.ಆರಿಫ್ ಔಟಾಗದೆ 39 ರನ್ ಸೇರಿಸಿದರು, ಆದರೆ ಪಾರಸ್ 52 ಎಸೆತಗಳಲ್ಲಿ 7 ಬೌಂಡರಿ ಮತ್ತು 9 ಸಿಕ್ಸರ್ ಗಳಿಸಿದರು.

ಇದಕ್ಕೂ ಮೊದಲು ಸಿಂಗಾಪುರ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿತ್ತು. ರೋಹನ್ ರಂಗರಾಜನ್ 6ರನ್, ಸುರೆಂದ್ರನ್ ಚಂದ್ರಮೋಹನ್ 35ರನ್ , ನಾಯಕ ಟಿಮ್ ಡಾವಿಡ್ ಔಟಾಗದೆ 64 ರನ್ , ವಿಕೆಟ್ ಕೀಪರ್ ಮನ್ ಪ್ರೀತ್ ಸಿಂಗ್ 15ಮತ್ತು ಜಾನಕ್ ಪ್ರಕಾಶ್ ಔಟಾಗದೆ 35 ರನ್ ಗಳಿಸಿದರು. ನೇಪಾಳದ ಕೆ.ಸಿ. ಕರಣ್ 34ಕ್ಕೆ 2 ಮತ್ತು ಸುಶಾನ್ ಭಾರಿ 27ಕ್ಕೆ 1 ವಿಕೆಟ್ ಪಡೆದರು.

ಖಡ್ಕಾ ದಾಖಲೆ: ಹನ್ನೆರಡು ದಿನ್ಳ ಹಿಂದೆ ನೆದರ್ ಲೆಂಡ್ ನ ನಾಯಕ ಪೀಟರ್ ಸೇಲಾರ್ ಸ್ಕಾಟ್ ಲ್ಯಾಂಡ್ ವಿರುದ್ಧ ಔಟಾಗದೆ 96 ರನ್ ಗಳಿಸಿದ್ದರು. ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಇಂಗ್ಲೆಂಡ್ ವಿರುದ್ಧ 90 ರನ್ ಮತ್ತು ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಆಸ್ಟ್ರೇಲಿಯ ವಿರುದ್ಧ 88 ರನ್ ಗಳಿಸಿದ್ದರು. ಇವರ ದಾಖಲೆಯನ್ನು ಪಾರಸ್ ಮುರಿದಿದ್ದಾರೆ.

2017ರಲ್ಲಿ ಚೇಸಿಂಗ್ ನಲ್ಲಿ ಶ್ರೀಲಂಕಾದ ವಿರುದ್ಧ 86 ರನ್ ಗಳಿಸಿದ್ದರು. ಪಾರಸ್ ನೇಪಾಲ ತಂಡದ ಪರ ಏಕದಿನ ಕ್ರಿಕೆಟ್ ನಲ್ಲಿ ಶತಕ ದಾಖಲಿಸಿದ ನೇಪಾಳದ ಮೊದಲ ಬ್ಯಾಟ್ಸ್ ಮನ್. ಕಳೆದ ತಿಂಗಳು ಅವರು ಮಲೇಶ್ಯ ವಿರುದ್ಧ ಅಜೇಯ 86 ರನ್ ಸಿಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News