ಮುನ್ಸೂಚನೆಯಿಲ್ಲದೆ ಯಾವುದೇ ರಾತ್ರಿ ದಾಳಿ ನಡೆಸುತ್ತೇವೆ: ಸಿರಿಯಾಗೆ ಎರ್ದೊಗಾನ್ ಎಚ್ಚರಿಕೆ

Update: 2019-10-07 10:34 GMT

ಇಸ್ತಾಂಬುಲ, ಅ.7: ಸಿರಿಯಾದ ಕುರ್ದಿಶ್ ಪಡೆಗಳ ಮೇಲೆ ಯಾವಾಗ ಬೇಕಾದರೂ ಕಾರ್ಯಾಚರಣೆ ನಡೆಸಲು ತಮ್ಮ ಸೇನೆ ಸನ್ನದ್ಧವಾಗಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆ. ಅಮೆರಿಕಾ ದೇಶವು ಟರ್ಕಿಯ ಹಾದಿಯಲ್ಲಿ ನಿಲ್ಲುವುದಿಲ್ಲ ಎಂದು ಘೋಷಿಸಿದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.

"ನಾವು ಯಾವತ್ತೂ ಹೇಳುವ ಮಾತೊಂದಿದೆ, ನಾವು ಯಾವುದೇ ರಾತ್ರಿ ಮುನ್ಸೂಚನೆಯಿಲ್ಲದೆ ಬರಬಲ್ಲೆವು'' ಎಂದು ಎರ್ದೊಗಾನ್ ಸುದ್ದಿಗಾರರಿಗೆ ತಿಳಿಸಿದರು. "ಈ ಉಗ್ರ ಸಂಘಟನೆಗಳ ಬೆದರಿಕೆಗಳನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ" ಎಂದೂ ಅವರು ಹೇಳಿದರು.

"ಟರ್ಕಿ ಸದ್ಯದಲ್ಲಿಯೇ ಉತ್ತರ ಸಿರಿಯಾದಲ್ಲಿ ತನ್ನ ಬಹುಕಾಲದಿಂದ ಯೋಜಿಸಲ್ಪಟ್ಟ ಕಾರ್ಯಾಚರಣೆಗೆ ಎದುರು ನೋಡಲಿದೆ. ಕಳೆದೆರಡು ವರ್ಷಗಳಿಂದ ಆ ಪ್ರದೇಶದಲ್ಲಿ ಸೆರೆ ಹಿಡಿಯಲ್ಪಟ್ಟ ಎಲ್ಲಾ ಐಎಸ್ ಉಗ್ರರಿಗೆ ಟರ್ಕಿ ಜವಾಬ್ದಾರಿಯಾಗಿದೆ" ಎಂದು ಶ್ವೇತಭವನದ ಹೇಳಿಕೆ ತಿಳಿಸಿತ್ತು.

"ಸೆರೆ ಹಿಡಿಯಲ್ಪಟ್ಟ ಎಲ್ಲರನ್ನೂ ನಮಗೆ ನೋಡಿಕೊಳ್ಳಲು ಸಾಧ್ಯವಿಲ್ಲ, ಫ್ರಾನ್ಸ್, ಜರ್ಮನಿ ಹಾಗೂ ಇತರ ದೇಶಗಳ ಬಂಧಿಗಳೂ  ಇದ್ದಾರೆ. ನಮಗೆ ಅವರ ಮೇಲೆ ಹಿಡಿತವಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಈ ಕೈದಿಗಳ ಕುರಿತಂತೆ ತೀರ್ಮಾನಿಸಲು ಯುರೋಪಿಯನ್ ದೇಶಗಳ ಸರಕಾರಗಳೊಂದಿಗೆ ಕೈಜೋಡಿಸುತ್ತೇವೆ'' ಎಂದು ಎರ್ದೊಗಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News