ಬ್ರಿಟನ್‌ನಿಂದ ಗಾಂಧಿ ಚಿತ್ರವಿರುವ ನಾಣ್ಯ ಬಿಡುಗಡೆ

Update: 2019-10-12 17:36 GMT

ಲಂಡನ್, ಅ. 12: ಮಹಾತ್ಮಾ ಗಾಂಧೀಜಿಯ 150ನೇ ಜನ್ಮದಿನದ ಸಂದರ್ಭದಲ್ಲಿ ಬ್ರಿಟನ್ ಸರಕಾರವು ಅವರ ಸ್ಮರಣಾರ್ಥ ವಿಶೇಷ ನಾಣ್ಯವೊಂದನ್ನು ಹೊರಡಿಸಲಿದೆ ಎಂದು ಬ್ರಿಟಿಶ್ ಹಣಕಾಸು ಸಚಿವ ಸಾಜಿದ್ ಜಾವೇದ್ ಹೇಳಿದ್ದಾರೆ.

2015ರಲ್ಲಿ ಜಾವೇದ್ ಸಂಸ್ಕೃತಿ ಕಾರ್ಯದರ್ಶಿಯಾಗಿದ್ದಾಗ ಲಂಡನ್‌ನಲ್ಲಿ ಗಾಂಧೀಜಿ ಪ್ರತಿಮೆಯೊಂದನ್ನು ಸ್ಥಾಪಿಸಿದ್ದರು.

ಗಾಂಧೀಜಿಯ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ತ್ವರಿತಗೊಳಿಸುವಂತೆ ‘ಮಾಸ್ಟರ್ ಆಫ್ ದ ರಾಯಲ್ ಮಿಂಟ್’ ಆಗಿ ಕರೆ ನೀಡಿದ್ದೇನೆ ಎಂದು ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹೇಳಿದರು.

‘‘ಅಂದು ಸಂಸ್ಕೃತಿ ಕಾರ್ಯದರ್ಶಿಯಾಗಿದ್ದಾಗ ಸಂಸತ್ತಿನ ಹೊರಗಡೆ ನೂತನ ಗಾಂಧಿ ಪ್ರತಿಮೆಯೊಂದನ್ನು ಸ್ಥಾಪಿಸಲು ಮುತುವರ್ಜಿ ವಹಿಸಿದ್ದ ಬಗ್ಗೆ ನಾನು ಅತೀವ ಹೆಮ್ಮೆ ಪಡುತ್ತೇನೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News