ಮದ್ದುಗುಂಡುಗಳ ಉಗ್ರಾಣದ ಮೇಲೆ ಅಮೆರಿಕ ದಾಳಿ

Update: 2019-10-17 17:38 GMT

ವಾಶಿಂಗ್ಟನ್, ಅ. 17: ಅಮೆರಿಕದ ಎರಡು ಯುದ್ಧ ವಿಮಾನಗಳು ಬುಧವಾರ ಸಿರಿಯದಲ್ಲಿರುವ ಅಮೆರಿಕದ ಮದ್ದುಗುಂಡುಗಳ ಉಗ್ರಾಣ ಬಂಕರ್ ಮೇಲೆ ಪೂರ್ವ ನಿಯೋಜಿತ ದಾಳಿ ನಡೆಸಿದವು. ಸಿರಿಯದಿಂದ ಅಮೆರಿಕದ ಸೈನಿಕರು ವಾಪಸಾದ ಬಳಿಕ, ಅಲ್ಲಿ ಉಳಿದಿರುವ ಮದ್ದುಗುಂಡುಗಳು ಮತ್ತು ಇತರ ಸಲಕರಣೆಗಳನ್ನು ನಾಶಪಡಿಸಲು ನಾಶಪಡಿಸಲು ಈ ದಾಳಿಯನ್ನು ನಡೆಸಲಾಗಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ತಿಳಿಸಿದರು.

 ಮದ್ದುಗುಂಡುಗಳ ಸಂಗ್ರಹವನ್ನು ನಾಶಪಡಿಸಲು ಹಾಗೂ ಉಗ್ರಾಣದ ಸೇನಾ ಉಪಯುಕ್ತತೆಯನ್ನು ಕಡಿಮೆ ಮಾಡಲು ಲಫಾರ್ಗೆ ಸಿಮೆಂಟ್ ಕಾರ್ಖಾನೆಯ ಮೇಲೆ ಎರಡು ಎಫ್-15ಇ ವಿಮಾನಗಳು ದಾಳಿ ನಡೆಸಿದವು ಎಂದು ಐಸಿಸ್ ವಿರುದ್ಧ ಹೋರಾಡುತ್ತಿರುವ ಅಮೆರಿಕ ನೇತೃತ್ವದ ಸೇನಾ ಮಿತ್ರಕೂಟದ ವಕ್ತಾರ ಮೈಲ್ಸ್ ಕ್ಯಾಗಿನ್ಸ್ ಹೇಳಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಸಶಸ್ತ್ರ ಗುಂಪುಗಳ ಕೈಗೆ ಮದ್ದುಗುಂಡುಗಳು ಮತ್ತು ಇತರ ಉಪಕರಣಗಳು ಸಿಗದಂತೆ ಖಾತರಿಪಡಿಸುವುದಕ್ಕಾಗಿ ವಾಯು ದಾಳಿಗಳನ್ನು ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News