×
Ad

ಟ್ರಂಪ್ ಪತ್ರವನ್ನು ಕಸದ ಬುಟ್ಟಿಗೆ ಎಸೆದ ಟರ್ಕಿ ಅಧ್ಯಕ್ಷ ಎರ್ದೊಗಾನ್

Update: 2019-10-18 22:57 IST

 ಇಸ್ತಾಂಬುಲ್ (ಟರ್ಕಿ), ಅ. 18: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬರೆದ ಪತ್ರವನ್ನು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ವರದಿಗಳು ಹೇಳಿವೆ.

‘ಕಠಿಣ ವ್ಯಕ್ತಿಯಾಗಬೇಡಿ’ ಮತ್ತು ‘ಮೂರ್ಖನಾಗಬೇಡಿ’ ಎಂಬ ಸಲಹೆಯನ್ನು ಈ ಪತ್ರದಲ್ಲಿ ಟ್ರಂಪ್ ಎರ್ದೊಗಾನ್‌ಗೆ ನೀಡಿದ್ದಾರೆ ಹಾಗೂ ನೀವು ನಿಮ್ಮ ಪಡೆಗಳನ್ನು ಸಿರಿಯಕ್ಕೆ ಕಳುಹಿಸಿದರೆ, ನಿಮ್ಮನ್ನು ‘ದೆವ್ವ’ವೆಂಬಂತೆ ಪರಿಗಣಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

‘‘ಟರ್ಕಿ ಅಧ್ಯಕ್ಷ ಎರ್ದೊಗಾನ್ ಪತ್ರವನ್ನು ಸ್ವೀಕರಿಸಿದ್ದಾರೆ ಹಾಗೂ ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿ ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಟರ್ಕಿಯ ಅಧ್ಯಕ್ಷೀಯ ಮೂಲಗಳು ಬಿಬಿಸಿಗೆ ತಿಳಿಸಿವೆ.

ಅಮೆರಿಕದ ಸೈನಿಕರನ್ನು ಸಿರಿಯದಿಂದ ಹಿಂದಕ್ಕೆ ಪಡೆದ ಬಳಿಕ, ಅಕ್ಟೋಬರ್ 9ರಂದು ಟ್ರಂಪ್ ಟರ್ಕಿ ಅಧ್ಯಕ್ಷರಿಗೆ ಪತ್ರ ಕಳುಹಿಸಿದ್ದರು.

 ‘‘ನಾವೊಂದು ಉತ್ತಮ ವ್ಯವಹಾರಕ್ಕೆ ಬರೋಣ. ಸಾವಿರಾರು ಜನರನ್ನು ಕೊಂದ ಹೊಣೆಯನ್ನು ಹೊರಲು ನೀವು ಬಯಸುವುದಿಲ್ಲ ಹಾಗೂ ಟರ್ಕಿಯ ಆರ್ಥಿಕತೆಯನ್ನು ನಾಶಪಡಿಸಿದ ಜವಾಬ್ದಾರಿಯನ್ನು ಹೊರಲು ನಾನು ಬಯಸುವುದಿಲ್ಲ’’ ಎಂದು ಟ್ರಂಪ್ ತನ್ನ ಪತ್ರದಲ್ಲಿ ಹೇಳಿದ್ದರು.

ಆದರೆ, ಪತ್ರ ಸಿಕ್ಕಿದ ದಿನವೇ ಟರ್ಕಿ ಉತ್ತರ ಸಿರಿಯದಲ್ಲಿರುವ ಕುರ್ದ್ ಪಡೆಗಳ ಮೇಲೆ ಸೇನಾ ದಾಳಿಯನ್ನು ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News