ಯಾವಾಗ, ಏನು ತಪ್ಪಿತು ಎಂದು ಸ್ಮರಿಸುವುದು ಅಗತ್ಯ: ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರ್ಮಲಾ

Update: 2019-10-18 17:32 GMT

  ವಾಶಿಂಗ್ಟನ್, ಅ. 18: ಭಾರತದ ಕುಸಿಯುತ್ತಿರುವ ಆರ್ಥಿಕತೆಯ ಹೊಣೆಯನ್ನು ಪ್ರತಿಪಕ್ಷಗಳ ತಲೆಗೆ ಕಟ್ಟುವ ಗೀಳಿಗೆ ಸರಕಾರ ಒಳಗಾಗಿದೆ ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರ ಹೇಳಿಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತ್ಯುತ್ತರ ನೀಡಿದ್ದಾರೆ.

‘‘ನಿರ್ದಿಷ್ಟ ಅವಧಿಯಲ್ಲಿ ಯಾವಾಗ ಮತ್ತು ಏನು ತಪ್ಪಿತು ಎನ್ನುವುದನ್ನು ಸ್ಮರಿಸುವುದು ಅತ್ಯಂತ ಅಗತ್ಯವಾಗಿದೆ’’ ಎಂದು ಅಮೆರಿಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಹೇಳಿದರು.

ತನ್ನ ಆಡಳಿತದಲ್ಲಿ ಕೆಲವು ‘ದೌರ್ಬಲ್ಯಗಳಿದ್ದವು’ ಎನ್ನುವುದನ್ನು ಒಪ್ಪಿಕೊಂಡ ಮನಮೋಹನ್ ಸಿಂಗ್, ಪ್ರತಿಯೊಂದು ಆರ್ಥಿಕ ಬಿಕ್ಕಟ್ಟಿಗೂ ನನ್ನ ಸರಕಾರವನ್ನು ದೂಷಿಸುವುದನ್ನು ಮೋದಿ ಸರಕಾರ ನಿಲ್ಲಿಸಬೇಕು ಎಂದು ಹೇಳಿದ್ದರು. ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಐದು ವರ್ಷಗಳ ಅವಧಿ ಧಾರಾಳವಾಗಿದೆ ಎಂದಿದ್ದರು.

‘‘ಆರೋಪ ಹೊರಿಸಬೇಡಿ ಎಂದು ನನಗೆ ಹೇಳಿರುವುದಕ್ಕಾಗಿ ಮನಮೋಹನ್ ಸಿಂಗ್‌ ರನ್ನು ನಾನು ಗೌರವಿಸುತ್ತೇನೆ. ಆದರೆ, ನಿರ್ದಿಷ್ಟ ಅವಧಿಯಲ್ಲಿ ಯಾವಾಗ ಮತ್ತು ಏನು ತಪ್ಪು ನಡೆಯಿತು ಎನ್ನುವುದನ್ನು ಸ್ಮರಿಸುವುದು ಅಗತ್ಯವಾಗಿದೆ’’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News