ಗನ್ ಹಿಡಿದು ಅಂಗಡಿಗೆ ನುಗ್ಗಿದ ದರೋಡೆಕೋರ ವೃದ್ಧೆ ಹಣ ನೀಡಿದಾಗ ಪ್ರತಿಕ್ರಿಯಿಸಿದ್ದು ಹೀಗೆ...

Update: 2019-10-18 17:33 GMT

ಶಸ್ತ್ರಸಜ್ಜಿತವಾಗಿ ಅಂಗಡಿಯೊಂದಕ್ಕೆ ನುಗ್ಗಿದ ದರೋಡೆಕೋರರು ವೃದ್ಧೆ ಗ್ರಾಹಕರೊಬ್ಬರ ಹಣೆಗೆ ಮುತ್ತಿಕ್ಕಿ ಆಕೆ ನೀಡಿದ ಹಣವನ್ನು ನಿರಾಕರಿಸಿರುವ ವಿಡಿಯೋವೊಂದು ವೈರಲ್ ಆಗಿದೆ.

ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಅಂಗಡಿಗೆ ನುಗ್ಗಿದ ದರೋಡೆಕೋರರು ಅಂಗಡಿ ಮಾಲಕನನ್ನು ಗನ್ ತೋರಿಸಿ ಬೆದರಿಸುತ್ತಾನೆ. ಈ ಸಂದರ್ಭ ವೃದ್ಧೆ ದರೋಡೆಕೋರರ ಸಮೀಪವೇ ಇರುತ್ತಾರೆ.

ಓರ್ವ ದರೋಡೆಕೋರ ಮಾಲಕನ ತಲೆಗೆ ಗನ್ ಹಿಡಿದು ಹಣವನ್ನು ಪಡೆಯುತ್ತಾನೆ. ಈ ಸಂದರ್ಭ ತನ್ನ ಸಮೀಪ ನಿಂತಿದ್ದ ದರೋಡೆಕೋರನಿಗೆ ವೃದ್ಧೆ ತನ್ನಲ್ಲಿದ್ದ ಹಣವನ್ನು ನೀಡಿ ಯಾರಿಗೂ ಏನೂ ಮಾಡಬೇಡಿ ಎಂದು ವಿನಂತಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ದರೋಡೆಕೋರ ತನ್ನ ಹೆಲ್ಮೆಟ್ ತೆಗೆದು ವೃದ್ಧೆಯ ಹಣೆಗೆ ಮುತ್ತಿಕ್ಕಿ "ನಿಮ್ಮ ಹಣ ನನಗೆ ಬೇಕಾಗಿಲ್ಲ" ಎನ್ನುತ್ತಾನೆ.  ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News