ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹೊರಬರುವುದು ಖಚಿತ: ಟ್ರಂಪ್

Update: 2019-10-24 16:41 GMT

ವಾಶಿಂಗ್ಟನ್, ಅ. 24: ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ಹೊರಬರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಖಚಿತಪಡಿಸಿದ್ದಾರೆ.

ಇನ್ನು ಎರಡು ವಾರಗಳಲ್ಲಿ ಅವರ ಆಡಳಿತವು ಈ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಬಹುದಾಗಿದೆ.

‘‘ಪ್ಯಾರಿಸ್ ಒಪ್ಪಂದವು ನೀವೆಂದೂ ಭಾವಿಸಿರದ ರೀತಿಯಲ್ಲಿ, ಅಗಾಧ ನಿರ್ಬಂಧಗಳ ಮೂಲಕ ಅಮೆರಿಕದ ಕೈಗಾರಿಕೆಗಳನ್ನು ಮುಚ್ಚಬಹುದಾಗಿದೆ. ಅದೇ ವೇಳೆ, ವಿದೇಶಿ ಕೈಗಾರಿಕೆಗಳು ಯಾವುದೇ ನಿರ್ಬಂಧವಿಲ್ಲದೆ ಪರಿಸರವನ್ನು ಮಲಿನಗೊಳಿಸಲು ಅದು ಅವಕಾಶ ನೀಡುತ್ತದೆ’’ ಎಂದು ಪಿಟ್ಸ್‌ಬರ್ಗ್‌ನಲ್ಲಿ ಬುಧವಾರ ನಡೆದ ಇಂಧನ ಸಮಾವೇಶವೊಂದರಲ್ಲಿ ಟ್ರಂಪ್ ಹೇಳಿದರು.

‘‘ವಿದೇಶಿ ಮಾಲಿನ್ಯಕಾರರನ್ನು ಶ್ರೀಮಂತರನ್ನಾಗಿ ಮಾಡುತ್ತಾ, ಅಮೆರಿಕನ್ ಜನತೆಯನ್ನು ಶಿಕ್ಷಿಸಲು ನಾವು ಬಯಸುವುದಿಲ್ಲ’’ ಎಂದು ಅವರು ಹೇಳಿದರು. ‘‘ಇದನ್ನು ಹೇಳಲು ನಾನು ಹೆಮ್ಮೆಪಡುತ್ತೇನೆ. ಇದನ್ನು ನಾವು ‘ಅಮೆರಿಕ ಮೊದಲು’ ಎಂದು ಕರೆಯುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News