×
Ad

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧುಗೆ ಸೋಲಿನ ಆಘಾತ

Update: 2019-10-26 23:30 IST

ಪ್ಯಾರಿಸ್,ಅ.26: ಭಾರತದ ಶಟ್ಲರ್ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೋತು ಹೊರ ನಡೆದಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್ ಆದ ಬಳಿಕ ತನ್ನ ಸೋಲಿನ ಸರಪಳಿ ಮುಂದುವರಿಸಿದ್ದಾರೆ.

ಸಿಂಧು ಶುಕ್ರವಾರ ತಡರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ತೈವಾನ್‌ನ ತೈ ಝು ಯಿಂಗ್ ವಿರುದ್ಧ 16-21, 26-24, 17-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

24ರ ಹರೆಯದ ಸಿಂಧು ಮೊದಲ ಗೇಮ್‌ನ್ನು 16-21 ಅಂತರದಿಂದ ಕಳೆದುಕೊಂಡು ಕಳಪೆ ಆರಂಭ ಪಡೆದರು. ಎರಡನೇ ಗೇಮ್‌ನ್ನು 26-24 ಅಂತರದಿಂದ ಗೆದ್ದುಕೊಂಡು ತಿರುಗೇಟು ನೀಡಿದರು. ಆದರೆ,ಮೂರನೇ ಗೇಮ್‌ನಲ್ಲಿ ಗೆಲುವಿನ ವೇಗ ಕಾಯ್ದುಕೊಳ್ಳಲು ವಿಫಲವಾದ ಸಿಂಧು 17-21 ಅಂತರದಿಂದ ಸೋತಿದ್ದಾರೆ. 75 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಯಿಂಗ್ ಜಯಶಾಲಿಯಾದರು.

ಇದಕ್ಕೂ ಮೊದಲು ನಡೆದ ಪುರುಷರ ಡಬಲ್ಸ್ ನಲ್ಲಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಸೆಮಿ ಫೈನಲ್‌ಗೆ ತೇರ್ಗಡೆಯಾದರು. ಈ ಜೋಡಿ ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್ ನ ಕಿಮ್ ಅಸ್ಟ್ರಪ್ ಹಾಗೂ ಆ್ಯಂಡರ್ಸ್ ಸಕಾರುಪ್ ರಸ್ಮುಸ್ಸೆನ್ ವಿರುದ್ಧ 21-13, 22-20 ಅಂತರದಿಂದ ಜಯ ಸಾಧಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News