ಚೀನಾ ಓಪನ್ : ಸಿಂಧು ಆರಂಭಿಕ ಸುತ್ತಿನಲ್ಲೇ ನಿರ್ಗಮನ

Update: 2019-11-05 13:19 GMT

ಪುಝವ್ , ನ.5:  ಚೀನಾ  ಓಪನ್ ನ  ಮಹಿಳೆಯರ ಸಿಂಗಲ್ಸ್ ನ ಆರಂಭಿಕ ಸುತ್ತಿನಲ್ಲಿ  ಮಂಗಳವಾರ ವಿಶ್ವ ಚಾಂಪಿಯನ್ ಪಿ.ವಿ ಸಿಂಧು  ಅವರು ತೈವಾನ್‌ನ ಪೈ ಯು ಪೊ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದರು.

ಚೀನಾ, ಕೊರಿಯಾ ಮತ್ತು ಡೆನ್ಮಾರ್ಕ್‌ ಓಪನ್ ನಲ್ಲಿ  ಆರಂಭಿಕ  ಸುತ್ತಿನಲ್ಲೇ ನಿರ್ಗಮಿಸಿದ್ದ    ವಿಶ್ವದ 6 ನೇ ಕ್ರಮಾಂಕದ ಸಿಂಧು ಅವರು ತೈವಾನ್‌ನ ಪೈ ಯು ಪೊ  ವಿರುದ್ಧ  13-21 21-18 19-21 ಅಂತರದಲ್ಲಿ ಸೋಲು ಅನುಭವಿಸಿದರು

ವಿಶ್ವದ 42ನೇ ಶ್ರೇಯಾಂಕದ ಪೈ  ವಿರುದ್ಧ ಕೇವಲ  74 ನಿಮಿಷಗಳಲ್ಲಿ ಸಿಂಧು ಸೋತು ತನ್ನ ಅಭಿಯಾನವನ್ನು ಕೊನೆಗೊಳಿಸಿದರು.

30 ನೇ ಸ್ಥಾನದಲ್ಲಿರುವ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಕೆನಡಾದ ಜೋಶುವಾ ಹರ್ಲ್‌ಬರ್ಟ್-ಯು ಮತ್ತು ಜೋಸೆಫೀನ್ ವು ಅವರನ್ನು 21-19 21-19ರಿಂದ ಸೋಲಿಸಿ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಸಕಾರಾತ್ಮಕ ಆರಂಭವನ್ನು ಗಳಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ಆರಂಭಿಕ ಸುತ್ತಿನಲ್ಲಿ ಡೆನ್ಮಾರ್ಕ್‌ನ ರಾಸ್‌ಮಸ್ ಜೆಮ್ಕೆ ವಿರುದ್ಧ 17-21 18-21 ಅಂತರದಲ್ಲಿ ಸೋತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News