ಶೂಟಿಂಗ್‌: ಭಾರತದ 12 ನೇ ಒಲಿಂಪಿಕ್ ಕೋಟಾವನ್ನು ಪಡೆದ ತೇಜಸ್ವಿನಿ

Update: 2019-11-09 11:15 GMT

ದೋಹಾ, ನ.9: ತೇಜಸ್ವಿನಿ ಸಾವಂತ್ ಅವರು ಶೂಟಿಂಗ್ ನಲ್ಲಿ ಭಾರತದ 12 ನೇ ಒಲಿಂಪಿಕ್ ಕೋಟಾವನ್ನು ಬಾಚಿಕೊಂಡಿದ್ದಾರೆ.

ಇಲ್ಲಿ ನಡೆಯುತ್ತಿರುವ 14 ನೇ ಏಶ್ಯನ್ ಚಾಂಪಿಯನ್‌ಶಿಪ್‌ನ ಮಹಿಳೆಯರ 50 ಮೀ ರೈಫಲ್    3 ಪೋಸಿಷನ್ನ   ಅರ್ಹತಾ ಸುತ್ತಿನಲ್ಲಿ  5ನೇ ಸ್ಥಾನದೊಂದಿಗೆ   ಫೈನಲ್‌ಗೆ ಅರ್ಹತೆ ಪಡೆದರು. ಇದರೊಂದಿಗೆ ತೇಜಸ್ವಿನಿ ಸಾವಂತ್ ಅವರು ಶೂಟಿಂಗ್‌ನಲ್ಲಿ ಭಾರತದ 12 ನೇ ಒಲಿಂಪಿಕ್ ಕೋಟಾವನ್ನು  ಪಡೆದುಕೊಂಡರು.

39 ವರ್ಷದ ಸಾವಂತ್ 1171  ಪಾಯಿಂಟ್ಸ್ ನೊಂದಿಗೆ ಐದನೇ ಸ್ಥಾನ ಗಳಿಸುವ ಮೂಲಕ ಟೋಕಿಯೊ ಕೋಟಾವನ್ನು ಭರ್ತಿ ಮಾಡಿದರು.

ಫೈನಲ್ ಪ್ರವೇಶಿಸಿದ 8 ಮಂದಿ ಮಹಿಳಾ  ಶೂಟರ್ ಗಳಲ್ಲಿ  ಆರು ಮಂದಿ ಈಗಾಗಲೇ ಟೋಕಿಯೊಗೆ  ಟಿಕೆಟ್  ಕಾಯ್ದಿರಿಸಿದ್ದು, ಸಾವಂತ್‌ಗೆ ಒಲಿಂಪಿಕ್ ಕೋಟಾ ಗಳಿಸಲು  ಹಾದಿ ಮಾಡಿಕೊಟ್ಟಿದ್ದಾರೆ.

50 ಮೀಟರ್ ರೈಫಲ್ ಪ್ರೋನೆ  ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಲಿರುವ  ಸಾವಂತ್, ವಿಶ್ವ ಚಾಂಪಿಯನ್‌ಶಿಪ್, ವಿಶ್ವಕಪ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಸೇರಿದಂತೆ ಹಲವು ಪದಕಗಳನ್ನು ಗೆದ್ದಿದ್ದಾರೆ. ಒಲಿಂಪಿಕ್ ಗೆ ಇದೇ ಮೊದಲ ಬಾರಿ ಪ್ರವೇಶ ಪಡೆದಿದ್ದಾರೆ

2010 ರಲ್ಲಿ, ಮ್ಯೂನಿಚ್‌ನಲ್ಲಿ ನಡೆದ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಅವರು ವಿಶ್ವ-ದಾಖಲೆಯ ಸಮಾನ ಸ್ಕೋರ್‌ನೊಂದಿಗೆ ವಿಶ್ವ ಚಾಂಪಿಯನ್  ಎನಿಸಿಕೊಂಡಿದ್ದರು . ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News