ಭಾರತಕ್ಕೆ ಮರಳುವಂತೆ ಕೇಂಬ್ರಿಜ್ ಸಂಶೋಧನಾ ವಿದ್ಯಾರ್ಥಿನಿಗೆ ಸೂಚನೆ

Update: 2019-11-12 16:28 GMT

ಲಂಡನ್, ನ. 12: ಭಾರತದಲ್ಲಿ ಹೆಚ್ಚಿನ ಸಮಯವನ್ನು ಕಳೆದಿರುವುದಕ್ಕಾಗಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರಿಗೆ ಬ್ರಿಟನ್‌ನಲ್ಲಿ ಖಾಯಂ ವಾಸ್ತವ್ಯವನ್ನು ನಿರಾಕರಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ನೂರಾರು ಶಿಕ್ಷಣವೇತ್ತರು, ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ಬ್ರಿಟಿಶ್ ಗೃಹ ಕಚೇರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

ತನ್ನ ಕ್ಷೇತ್ರಕಾರ್ಯ ಮತ್ತು ಸಂಶೋಧನೆಗಾಗಿ ಭಾರತದಲ್ಲಿ ಹೆಚ್ಚು ಸಮಯವನ್ನು ಕಳೆಯುವುದು ಅಗತ್ಯವಾಗಿತ್ತು ಎಂದು ವಿದ್ಯಾರ್ಥಿನಿ ಆಸಿಯಾ ಇಸ್ಲಾಮ್ ಹೇಳಿದ್ದಾರೆ.

ಅನಿರ್ದಿಷ್ಟಾವಧಿ ರಜೆಗಾಗಿ ಆಸಿಯಾ ಸಲ್ಲಿಸಿರುವ ಅರ್ಜಿಯನ್ನು ಬ್ರಿಟನ್‌ನ ಗೃಹ ಕಚೇರಿ ಕಳೆದ ತಿರಸ್ಕರಿಸಿತ್ತು. ಇಂಥ ಅರ್ಜಿ ಸಲ್ಲಿಸಬೇಕಾದರೆ ಎಷ್ಟು ಸಮಯ ಅವರು ಬ್ರಿಟನ್‌ನಿಂದ ಹೊರ ಇರಬೇಕೋ ಅದಕ್ಕಿಂತ ಹೆಚ್ಚು ಸಮಯ ಅವರು ಹೊರಗಿದ್ದರು ಎಂದು ಅದು ಅಭಿಪ್ರಾಯಪಟ್ಟಿದೆ.

ಆದರೆ, ತನ್ನ ಅನುಪಸ್ಥಿತಿಗೆ ಕಾರಣಗಳನ್ನು ಮತ್ತು ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದು 31 ವರ್ಷದ ಸಂಶೋಧನಾ ವಿದ್ಯಾರ್ಥಿನಿ ಹೇಳಿದ್ದಾರೆ.

ಆಸಿಯಾ ಬ್ರಿಟನ್‌ನಲ್ಲಿ ಹತ್ತು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ವಾಸಿಸುತ್ತಿದ್ದಾರೆ.

ಗೃಹ ಕಚೇರಿಯ ಪತ್ರಕ್ಕೆ 900ಕ್ಕೂ ಅಧಿಕ ಶಿಕ್ಷಣವೇತ್ತರು ಮತ್ತು ವಿದ್ಯಾರ್ಥಿಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಬಹಿರಂಗ ಪತ್ರವು ಗೃಹ ಕಚೇರಿಯನ್ನು ಒತ್ತಾಯಿಸಿದೆ ಹಾಗೂ ಆಸಿಯಾರ ವಿಶೇಷ ರಜಾ ಅರ್ಜಿಯನ್ನು ಪರಿಶೀಲಿಸುವಾಗ ‘ಸರಿಯಾದ ವಿವೇಚನೆ’ಯನ್ನು ಬಳಸುವಂತೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‌ಗೆ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News