ಹಲವು ಭಾರತೀಯ ಐಟಿ ಕಂಪೆನಿಗಳಿಗೆ ಎಚ್-1ಬಿ ವೀಸಾ ನಿಷೇಧ

Update: 2019-11-12 16:36 GMT
ಫೋಟೊ:  thisisaustralia.com

ವಾಶಿಂಗ್ಟನ್, ನ. 12: ಅಮೆರಿಕ ಸರಕಾರವು ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ (ಐಟಿ) ಕಂಪೆನಿಗಳನ್ನು ಕಷ್ಟಕ್ಕೆ ಗುರಿಪಡಿಸಿದೆ ಎಂದು ನ್ಯಾಶನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿಯ ನೂತನ ಅಧ್ಯಯನವೊಂದು ತಿಳಿಸಿದೆ.

ಹಾಲಿ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಎಚ್-1ಬಿ ವೀಸಾಗಳ ನಿರಾಕರಣೆ ದರವು 24 ಶೇಕಡವನ್ನು ತಲುಪಿದೆ ಎಂದು ಅದು ಹೇಳಿದೆ.

ಎಚ್-1ಬಿ ವೀಸಾ ನಿರಾಕರಣೆ ಮಾತ್ರವಲ್ಲದೆ, ಎಚ್-1ಬಿ ವೀಸಾಗಳಿಗೆ ಅರ್ಜಿ ಸಲ್ಲಿಸುವುದರಿಂದ ನಿಷೇಧಿಸಲ್ಪಟ್ಟಿರುವ ಕಂಪೆನಿಗಳನ್ನೂ ಅಮೆರಿಕದ ಕಾರ್ಮಿಕ ಇಲಾಖೆ ಇತ್ತೀಚೆಗೆ ಹೆಸರಿಸಿದೆ.

ಎಚ್-1ಬಿ ವೀಸಾಗಳಿಗೆ ಅರ್ಜಿ ಸಲ್ಲಿಸುವುದರಿಂದ ನಿಷೇಧಿಸಲ್ಪಟ್ಟಿರುವ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪೆನಿಗಳೆಂದರೆ ಅಝಿಮೆಟ್ರಿ ಇಂಕ್, ಬಲ್ಮನ್ ಕನ್ಸಲ್ಟೆಂಟ್ ಗ್ರೂಪ್ ಇಂಕ್, ಬಿಸ್ನೆಸ್ ರಿಪೋರ್ಟಿಂಗ್ ಮ್ಯಾನೇಜ್‌ಮೆಂಟ್ ಸರ್ವಿಸಸ್ ಇಂಕ್, ನೆಟೇಜ್ ಇಂಕ್, ಕೆವಿನ್ ಚೇಂಬರ್ಸ್, ಇ-ಆ್ಯಸ್‌ಪೈರ್ ಐಟಿ ಎಲ್‌ಎಲ್‌ಸಿ ಹಾಗೂ ಇನ್ನೂ ಹಲವಾರು.

ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್)ಯಿಂದ ಪಡೆದ ಅಂಕಿ-ಅಂಶಗಳು, ಎಚ್-1ಬಿ ವೀಸಾ ಅರ್ಜಿಗಳ ಬಗ್ಗೆ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರಕಾರದ ಕಟ್ಟುನಿಟ್ಟಿನ ನೀತಿಯನ್ನು ಸೂಚಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News