ಅಧಿಕಾರಿಗಳ ವಿರುದ್ಧ ಕೋಪ: ಪ್ರಯಾಣಿಕರ ಬ್ಯಾಗ್ ಅದಲು ಬದಲು ಮಾಡಿದ ವಿಮಾನ ನಿಲ್ದಾಣ ಸಿಬ್ಬಂದಿ!

Update: 2019-11-12 16:43 GMT
ಫೋಟೊ: businessinsider.in

ಸಿಂಗಾಪುರ, ನ. 12: ಸಿಂಗಾಪುರದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸುಮಾರು 300 ಬ್ಯಾಗ್‌ಗಳ ಹೆಸರಿನ ಚೀಟಿಗಳನ್ನು ಅದಲು ಬದಲು ಮಾಡಿದ ಸಿಬ್ಬಂದಿಗೆ 20 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸಿಬ್ಬಂದಿಯ ಎಡವಟ್ಟಿನಿಂದಾಗಿ ಪ್ರಯಾಣಿಕರ ಚೀಲಗಳು ಜಗತ್ತಿನ ವಿವಿಧ ಮೂಲೆಗಳಿಗೆ ತಪ್ಪಾಗಿ ರವಾನೆಯಾಗಿದ್ದವು.

ಚಂಗಿ ವಿಮಾನ ನಿಲ್ದಾಣದಲ್ಲಿ 286 ಚೀಲಗಳ ಹೆಸರಿನ ಚೀಟಿಗಳನ್ನು ಅದಲು ಬದಲು ಮಾಡಿರುವುದನ್ನು 66 ವರ್ಷದ ಟೇ ಬೂನ್ ಕೆಹ್ ಒಪ್ಪಿಕೊಂಡಿದ್ದಾನೆ.

ತನ್ನ ಕೆಲಸದ ವಿಭಾಗದಲ್ಲಿ ಇನ್ನೋರ್ವ ಸಿಬ್ಬಂದಿಯನ್ನು ನೀಡಬೇಕೆಂಬ ತನ್ನ ಮನವಿಯನ್ನು ಅಧಿಕಾರಿಗಳು ತಿರಸ್ಕರಿಸಿದ ಬಳಿಕ ಹತಾಶೆಯಿಂದ ತಾನು ಈ ಕೃತ್ಯ ನಡೆಸಿದೆ ಎಂದು ತಪ್ಪಿತಸ್ಥ ಸಿಬ್ಬಂದಿ ನ್ಯಾಯಾಲಯದಲ್ಲಿ ಹೇಳಿದ್ದಾನೆ.

2016 ನವೆಂಬರ್ ಮತ್ತು 2017 ಫೆಬ್ರವರಿ ನಡುವಿನ ಅವಧಿಯಲ್ಲಿ ಈ ಅದಲು-ಬದಲು ಸಂಭವಿಸಿದೆ.

ಪರ್ತ್, ಮನಿಲಾ, ಫ್ರಾಂಕ್‌ಫರ್ಟ್, ಲಂಡನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಮುಂತಾದ ನಗರಗಳಿಗೆ ಹೋಗಬೇಕಾಗಿದ್ದ ಚೀಲಗಳು ಬೇರೆಡೆಗೆ ಪ್ರಯಾಣಿಸಿವೆ ಎಂದು ನ್ಯಾಯಾಲಯದ ದಾಖಲೆಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News