ಅಮೆರಿಕದ ಮಾಜಿ ಅಧ್ಯಕ್ಷ ಜಿಮಕ್ಮಿ ಕಾರ್ಟರ್ ಆಸ್ಪತ್ರೆಗೆ

Update: 2019-11-12 17:04 GMT

ವಾಶಿಂಗ್ಟನ್, ನ. 12: ಇತ್ತೀಚೆಗೆ ಬಿದ್ದು ಉಂಟಾದ ರಕ್ತಸ್ರಾವದಿಂದಾಗಿ ಮೆದುಳಿನ ಮೇಲೆ ಬಿದ್ದ ಒತ್ತಡವನ್ನು ನಿವಾರಿಸುವ ಚಿಕಿತ್ಸೆಗಾಗಿ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌ರನ್ನು ಸೋಮವಾರ ಅಟ್ಲಾಂಟದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ ಎಂದು ಕಾರ್ಟರ್ ಸೆಂಟರ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಜಾರ್ಜಿಯದ ಪ್ಲೇನ್ಸ್ ನಗರದಲ್ಲಿ 95 ವರ್ಷದ ಕಾರ್ಟರ್ ವಾಸಿಸುತ್ತಿದ್ದಾರೆ. ಅವರು ಅಮೆರಿಕದ ಜೀವಿಸುತ್ತಿರುವ ಅತಿ ಹಿರಿಯ ಮಾಜಿ ಅಧ್ಯಕ್ಷರಾಗಿದ್ದಾರೆ.

ಈ ಹಿಂದೆ ಅವರು ಅಕ್ಟೋಬರ್‌ನಲ್ಲೂ ಒಮ್ಮೆ ಬಿದ್ದು ಮುಖಕ್ಕೆ ಗಾಯವಾಗಿತ್ತು. ಆದರೆ, ಅದರ ಬಳಿಕ ಶೀಘ್ರವೇ ಅವರು ತನ್ನ ಕೆಲಸವನ್ನು ಆರಂಭಿಸಿದ್ದಾರೆ. ಅವರು ಪ್ರಸಕ್ತ ‘ಹ್ಯಾಬಿಟಾಟ್ ಫಾರ್ ಹ್ಯುಮೇನಿಟಿ’ ಎಂಬ ಪರೋಪಕಾರಿ ಸಂಸ್ಥೆಗಾಗಿ ಗೃಹ ನಿರ್ಮಾಣ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ.

ಡೆಮಾಕ್ರಟಿಕ್ ಪಕ್ಷದವರಾದ ಅವರು 1976ರಿಂದ 1980ರವರೆಗೆ ಅಮೆರಿಕದ 39ನೇ ಅಧ್ಯಕ್ಷರಾಗಿದ್ದರು.

 1980ರಲ್ಲಿ ಅವರು ಚುನಾವಣೆಯಲ್ಲಿ ಮರು ಆಯ್ಕೆ ಬಯಸಿದರಾದರೂ, ರಿಪಬ್ಲಿಕನ್ ಪಕ್ಷದ ರೊನಾಲ್ಡ್ ರೇಗನ್ ಎದುರು ಪರಾಭವಗೊಂಡರು. ಅವರಿಗೆ 2002ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News