ಬಾಂಗ್ಲಾ: ರೈಲುಗಳ ಢಿಕ್ಕಿ; ಕನಿಷ್ಠ 15 ಸಾವು

Update: 2019-11-12 17:09 GMT
ಫೋಟೊ: dw.com

ಢಾಕಾ, ನ. 12: ಪೂರ್ವ ಬಾಂಗ್ಲಾದೇಶದಲ್ಲಿ ಮಂಗಳವಾರ ಮುಂಜಾನೆ ಎರಡು ರೈಲುಗಳು ಢಿಕ್ಕಿಯಾದಾಗ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಹಾಗೂ 58 ಮಂದಿ ಗಾಯಗೊಂಡಿದ್ದಾರೆ.

ಢಾಕಕ್ಕೆ ತೆರಳುತ್ತಿದ್ದ ಇಂಟರ್‌ಸಿಟಿ ರೈಲು ಮತ್ತು ಚಿತ್ತಗಾಂಗ್‌ಗೆ ಹೋಗುತ್ತಿದ್ದ ರೈಲು ಇಂಜಿನ್ ಕಸ್ಬ ಪಟ್ಟಣದ ಮೊಂಡೊಲ್‌ಭಾಗ್ ನಿಲ್ದಾಣದಲ್ಲಿ ಢಿಕ್ಕಿಯಾದಾಗ ಬೋಗಿಗಳು ಹಳಿಗಳಿಂದ ಹಾರಿ ಹೊರಬಂದವು.

‘‘ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಹಾಗೂ 58 ಮಂದಿ ಗಾಯಗೊಂಡಿದ್ದಾರೆ. ಈ ವಲಯದ ವಿವಿಧ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ದಾಖಲಿಸಿದ್ದೇವೆ’’ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಅಪಘಾತಕ್ಕೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

‘‘ಈಗಲೂ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ತಪ್ಪು ನಿಶಾನೆ ಅಪಘಾತಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News