ಮಕ್ಕಳನ್ನು ಕೊಲ್ಲುವ ಜಗತ್ತಿನ ಅತಿ ಭೀಕರ ರೋಗ ಯಾವುದು ಗೊತ್ತಾ?

Update: 2019-11-12 17:15 GMT

ಪ್ಯಾರಿಸ್, ನ. 12: ನ್ಯುಮೋನಿಯ ಮಕ್ಕಳನ್ನು ಬಲಿ ಪಡೆಯುವ ಜಗತ್ತಿನ ಅತಿ ಭೀಕರ ರೋಗವಾಗಿದ್ದು, ಪ್ರತಿ 39 ಸೆಕೆಂಡ್‌ಗೆ ಒಂದು ಮಗುವಿನ ಜೀವವನ್ನು ತೆಗೆಯುತ್ತದೆ ಎಂದು ಅಂತರ್‌ರಾಷ್ಟ್ರೀಯ ಆರೋಗ್ಯ ಮತ್ತು ಮಕ್ಕಳ ಸಂಸ್ಥೆಗಳು ಮಂಗಳವಾರ ಎಚ್ಚರಿಸಿವೆ.

ಈ ರೋಗ ಬಾರದಂತೆ ತಡೆಯಬಹುದಾಗಿದೆ, ಆದರೂ ಇತರ ಯಾವುದೇ ಸೋಂಕಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕೊಲ್ಲುತ್ತದೆ ಎಂದು ‘ವಿಶ್ವ ನ್ಯುಮೋನಿಯ ದಿನ’ದ ಸಂದರ್ಭದಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ಈ ಸಂಸ್ಥೆಗಳು ಹೇಳಿವೆ.

ಕಳೆದ ವರ್ಷ ಈ ರೋಗದಿಂದಾಗಿ 5 ವರ್ಷಕ್ಕಿಂತ ಕೆಳಗಿನ ಪ್ರಾಯದ 8 ಲಕ್ಷ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

‘‘ಪ್ರತಿ ದಿನ, ಐದು ವರ್ಷಕ್ಕಿಂತ ಕೆಳಗಿನ ಸುಮಾರು 2,200 ಮಕ್ಕಳು ನ್ಯುಮೋನಿಯದಿಂದ ಸಾಯುತ್ತಿದ್ದಾರೆ. ಇದು ಗುಣಪಡಿಸಬಹುದಾದ ರೋಗವಾಗಿದೆ ಹಾಗೂ ಬಹುತೇಕ ತಡೆಗಟ್ಟಬಹುದಾದ ಕಾಯಿಲೆಯಾಗಿದೆ’’ ಎಂದು ಜಂಟಿ ಹೇಳಿಕೆ ತಿಳಿಸಿದೆ.

‘‘ಈ ರೋಗದ ವಿರುದ್ಧದ ಹೋರಾಟಕ್ಕೆ ಪ್ರಬಲ ಜಾಗತಿಕ ಬದ್ಧತೆ ಮತ್ತು ಹೆಚ್ಚಿನ ಹಣ ಹೂಡಿಕೆ ಅಗತ್ಯವಾಗಿದೆ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News