ದೂರು ಸಲ್ಲಿಸಿದವರನ್ನು ನ್ಯಾಯಾಲಯದಲ್ಲಿ ಗುಂಡು ಹಾರಿಸಿ ಕೊಂದ ಮಾಜಿ ಪೊಲೀಸ್

Update: 2019-11-12 17:47 GMT

ಬ್ಯಾಂಕಾಕ್ (ಥಾಯ್ಲೆಂಡ್), ನ. 12: ಥಾಯ್ಲೆಂಡ್‌ನ ನ್ಯಾಯಾಲಯವೊಂದರಲ್ಲಿ ಮಾಜಿ ಪೊಲೀಸನೊಬ್ಬ ತನ್ನ ವಿರುದ್ಧ ದೂರು ಸಲ್ಲಿಸಿದ್ದ ಇಬ್ಬರನ್ನು ಗುಂಡು ಹಾರಿಸಿ ಕೊಂದಿದ್ದಾನೆ. ಬಳಿಕ ಪೊಲೀಸರು ಹಂತಕನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಮಾಜಿ ಪೊಲೀಸ್ ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿ ಸುಳ್ಳು ಸಾಕ್ಷ್ಯ ನೀಡಿದ್ದಾನೆ ಎಂಬುದಾಗಿ ಆರೋಪಿಸಿದ ಇಬ್ಬರು ದೂರುದಾರರು ಮತ್ತು ಅವರ ವಕೀಲರ ಮೇಲೆ ಅವನು ಗುಂಡು ಹಾರಿಸಿದನು ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ಬ್ಯಾಂಕಾಕ್‌ನ ಪೂರ್ವದಲ್ಲಿರುವ ಚಂತಬುರಿ ಪ್ರಾಂತದ ನ್ಯಾಯಾಲಯವೊಂದರಲ್ಲಿ ಗುಂಡು ಹಾರಾಟ ನಡೆದಿದೆ. ಓರ್ವ ದೂರುದಾರ ಮತ್ತು ಓರ್ವ ವಕೀಲ ಮೃತಪಟ್ಟಿದ್ದಾರೆ.

 ಹಂತಕ ಮತ್ತು ಅವನ ವಿರುದ್ಧ ದೂರು ಸಲ್ಲಿಸಿದವರ ನಡುವೆ ಹಲವು ವರ್ಷಗಳಿಂದ ಜಮೀನಿಗೆ ಸಂಬಂಧಿಸಿದ ಸಿವಿಲ್ ವ್ಯಾಜ್ಯ ಮತ್ತು ಇತರ ಕ್ರಿಮಿನಲ್ ವ್ಯಾಜ್ಯಗಳು ನಡೆಯುತ್ತಿದ್ದವು.

ಅಕ್ಟೋಬರ್‌ನಲ್ಲಿ ದಕ್ಷಿಣ ಥಾಯ್ಲೆಂಡ್‌ನ ನ್ಯಾಯಾಲಯವೊಂದರಲ್ಲಿ ನ್ಯಾಯಾಧೀಶರೊಬ್ಬರು ಕೊಲೆ ಪ್ರಕರಣವೊಂದರಲ್ಲಿ ಐವರು ಮುಸ್ಲಿಮ್ ಆರೋಪಿಗಳನ್ನು ದೋಷಮುಕ್ತಗೊಳಿಸಿ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News