ಪ್ರಧಾನ ಸುತ್ತಿಗೆ ಸೌರಭ್ ವರ್ಮಾ ತೇರ್ಗಡೆ

Update: 2019-11-13 05:39 GMT

ಹಾಂಕಾಂಗ್, ನ.12: ಎರಡೂ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತೀಯ ಶಟ್ಲರ್ ಸೌರಭ್ ವರ್ಮಾ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಇಲ್ಲಿ ಮಂಗಳವಾರ 45 ನಿಮಿಷಗಳಲ್ಲಿ ಕೊನೆಗೊಂಡ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೌರಭ್ ಥಾಯ್ಲೆಂಡ್‌ನ ಟನೊಂಗ್‌ಸಕ್ ಸಾಯೆನ್‌ಸೊಂಬೂನ್ಸಕ್‌ರನ್ನು 21-15, 21-19 ಗೇಮ್‌ಗಳ ಅಂತರದಿಂದ ಮಣಿಸಿದರು.47 ನಿಮಿಷಗಳಲ್ಲಿ ಅಂತ್ಯಗೊಂಡ 2ನೇ ಪಂದ್ಯದಲ್ಲಿ ಫ್ರಾನ್ಸ್‌ನ ಲುಕಾಸ್ ಕ್ಲಾರ್‌ಬೌಟ್‌ರನ್ನು 21-19, 21-19 ಅಂತರದಿಂದಲೂ ಮಣಿಸಿ 400,000 ಡಾಲರ್ ಬಹುಮಾನ ಮೊತ್ತದ ಟೂರ್ನಮೆಂಟ್‌ನಲ್ಲಿ ಪ್ರಧಾನ ಸುತ್ತಿಗೆ ತೇರ್ಗಡೆಯಾದರು.

ಸೌರಭ್ ಬುಧವಾರ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯವನ್ನು ಆಡಲಿದ್ದಾರೆ. ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ವಿಶ್ವದ ನಂ.10ನೇ ಆಟಗಾರ ಕಿಡಂಬಿ ಶ್ರೀಕಾಂತ್,ಬಿ.ಸಾಯಿ ಪ್ರಣೀತ್, ಸಮೀರ್ ವರ್ಮಾ, ಎಚ್.ಎಸ್. ಪ್ರಣಯ್ ಹಾಗೂ ಪಾರುಪಲ್ಲಿ ಕಶ್ಯಪ್ ಸೆಣಸಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News