ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಪೃಥ್ವಿ ಶಾ ವೇಗದ ಅರ್ಧಶತಕ

Update: 2019-11-17 08:30 GMT

ಮುಂಬೈ, ನ.17:  ಡೋಪಿಂಗ್ ಕಾರಣಕ್ಕಾಗಿ  ಕ್ರಿಕೆಟ್ ನಿಂದ 8 ತಿಂಗಳ ನಿಷೇಧವನ್ನು ಎದುರಿಸಿ ವಾಪಸಾಗಿರುವ ಆರಂಭಿಕ ದಾಂಡಿಗ  ಪೃಥ್ವಿ ಶಾ  ಅವರು ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಪಂದ್ಯದಲ್ಲಿ ಇಂದು  ವೇಗದ  ಅರ್ಧ ಶತಕ ದಾಖಲಿಸಿದ್ದಾರೆ.

ಮುಂಬೈ ಈ ಪಂದ್ಯದಲ್ಲಿ ಅಸ್ಸಾಂ ವಿರುದ್ಧ 83 ರನ್ ಗಳ ಜಯ ಗಳಿಸಿದೆ. 207 ರನ್ ಗಳಿಸಬೇಕಿದ್ದ  ಅಸ್ಸಾಂ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 123 ರನ್ ಗಳಿಸಿತು.

ಟೆಸ್ಟ್ ಚೊಚ್ಚಲ ತನ್ನ ಪಂದ್ಯದಲ್ಲಿ ಶತಕ ಗಳಿಸಿದ ಎರಡನೇ ಕಿರಿಯ ಭಾರತೀಯ  ಎನಿಸಿಕೊಂಡಿದ್ದ  ಮುಂಬೈನ ಆರಂಭಿಕ ಬ್ಯಾಟ್ಸ್ ಮನ್ಶಾ  ಅವರು  ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಸ್ಸಾಂ ವಿರುದ್ಧ ಪಂದ್ಯದಲ್ಲಿ 39  ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 63 ರನ್  ಗಳಿಸಿದರು.

ಡೋಪಿಂಗ್ ಆರೋಪದಲ್ಲಿ ಅಮಾನತುಗೊಂಡಿದ್ದ  20ರ ಹರೆಯದ ಶಾ ಅರ್ಧಶತಕದ ನೆರವಿನಲ್ಲಿ ಮುಂಬೈ ತಂಡ ದೊಡ್ಡ ಮೊತ್ತದ ಸ್ಕೋರ್ ದಾಖಲಿಸಿದೆ.

ಮುಂಬೈ  ಈ ಪಂದ್ಯದಲ್ಲಿ 5 ವಿಕೆಟ್‌ ನಷ್ಟದಲ್ಲಿ  206 ರನ್ ಗಳಿಸಿತು. ಶಾ ಮತ್ತು ಆದಿತ್ಯ ತಾರೆ ಮೊದಲ ವಿಕೆಟ್‌ಗೆ 138 ರನ್ ಗಳ ಜೊತೆಯಾಟ ನೀಡಿದರು. ತಾರೆ 48 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ವಿಕೆಟ್ 82 ರನ್ ಸೇರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News