ಮಂಗಳ ಗ್ರಹದಲ್ಲಿ ಜೀವಿಗಳಿರುವುದಕ್ಕೆ ಪುರಾವೆಯಿದೆ: ಅಮೆರಿಕ ವಿಜ್ಞಾನಿ

Update: 2019-11-20 17:17 GMT
ಫೋಟೊ: Nasa

ನ್ಯೂಯಾರ್ಕ್, ನ. 20: ಮಂಗಳ ಗ್ರಹದಲ್ಲಿ ಜೀವಿಗಳಿರುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ವಿಜ್ಞಾನಿಗಳ ನಡುವೆ ಕೊನೆಮೊದಲಿಲ್ಲದ ಚರ್ಚೆ ನಡೆಯುತ್ತಿರುವಂತೆಯೇ, ಕೆಂಪು ಗ್ರಹದಲ್ಲಿ ಕೀಟಗಳಂಥ ಜೀವಿಗಳಿರುವುದಕ್ಕೆ ಪುರಾವೆಯಿದೆ ಎಂದು ಅಮೆರಿಕದ ಓಹಿಯೊ ವಿಶ್ವವಿದ್ಯಾನಿಲಯದ ಸಂಶೋಧಕರೊಬ್ಬರು ಹೇಳುತ್ತಾರೆ.

ವಿವಿಧ ಮಂಗಳ ಗ್ರಹ ಶೋಧಕ ನೌಕೆಗಳು ಕಳುಹಿಸಿರುವ ಚಿತ್ರಗಳನ್ನು ಅಧ್ಯಯನ ಮಾಡಿರುವ ಪ್ರೊಫೆಸರ್ ಎಮರಿಟಸ್ ವಿಲಿಯಮ್ ರೊಮೊಸರ್, ಜೇನುನೊಣಗಳನ್ನು ಹೋಲುವ ಆಕಾರ ಹೊಂದಿರುವ ಕೀಟಗಳು ಹಾಗೂ ಸರೀಸೃಪ (ಹಾವು)ಗಳಂಥ ಹಲವಾರು ಆಕೃತಿಗಳನ್ನು ಪತ್ತೆ ಮಾಡಿರುವುದಾಗಿ ಹೇಳಿದ್ದಾರೆ.

ಈ ಜೀವಿಗಳನ್ನು ಪಳೆಯುಳಿಕೆ ಮತ್ತು ಜೀವಂತ- ಎರಡೂ ವಿಧಗಳಲ್ಲಿ ಗುರುತಿಸಿದ್ದೇನೆ ಎಂದು ವಿಜ್ಞಾನಿ ಹೇಳುತ್ತಾರೆ. ‘‘ಮಂಗಳ ಗ್ರಹದಲ್ಲಿ ಜೀವಿಗಳಿದ್ದವು ಹಾಗೂ ಈಗಲೂ ಇವೆ’’ ಎಂದು ರೊಮೊಸರ್ ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News