ಇರಾನ್ ಪ್ರತಿಭಟನೆಯ ವೇಳೆ 106 ಮಂದಿ ಸಾವು: ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿ

Update: 2019-11-20 17:27 GMT

ಜಿದ್ದಾ, ನ. 20: ಇರಾನ್‌ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳವನ್ನು ವಿರೋಧಿಸಿ ಜನರು ನಡೆಸಿದ ಪ್ರತಿಭಟನೆಗಳ ವೇಳೆ ಕನಿಷ್ಠ 106 ಮಂದಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ ಎಂದು ‘ವಿಶ್ವಾಸಾರ್ಹ ವರದಿ’ಗಳನ್ನು ಉಲ್ಲೇಖಿಸಿ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಮಂಗಳವಾರ ತಿಳಿಸಿದೆ.

ರವಿವಾರ ದೇಶಾದ್ಯಂತ ಆರಂಭವಾದ ಪ್ರತಿಭಟನೆಗಳಲ್ಲಿ ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬ ಅಂಕಿಸಂಖ್ಯೆಗಳನ್ನು ಇರಾನ್ ಸರಕಾರ ಬಿಡುಗಡೆ ಮಾಡಿಲ್ಲ.

ಮೃತಪಟ್ಟವರ ನೈಜ ಸಂಖ್ಯೆ ಇದಕ್ಕಿಂತ ತುಂಬಾ ಹೆಚ್ಚಾಗಿರಬಹುದು ಎಂಬ ಭೀತಿಯನ್ನು ಆ್ಯಮ್ನೆಸ್ಟಿ ವ್ಯಕ್ತಪಡಿಸಿದೆ. ಸರಕಾರ ವಿರೋಧಿ ಪ್ರತಿಭಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 200ನ್ನು ತಲುಪಿರುವ ಸಾಧ್ಯತೆ ಇದೆ ಎಂದು ಕೆಲವು ವರದಿಗಳು ಹೇಳಿವೆ.

 ಪೆಟ್ರೋಲ್‌ನ ತೀವ್ರ ಬೆಲೆಯೇರಿಕೆಯನ್ನು ವಿರೊಧಿಸಿ ಪ್ರತಿಭಟನೆ ವ್ಯಾಪಿಸುತ್ತಿರುವಂತೆಯೇ, ಇರಾನ್ ಸರಕಾರವು ಇಂಟರ್‌ನೆಟನ್ನು ಸ್ಥಗಿತಗೊಳಿಸಿದೆ ಹಾಗೂ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸ್ ಮತ್ತು ಗಲಭೆ ನಿಗ್ರಹ ಪಡೆಗಳನ್ನು ನಿಯೋಜಿಸಿದೆ.

ದೇಶದಲ್ಲಿ ಈಗಲೂ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News