ಅಹರ್ನಿಶಿ ಟೆಸ್ಟ್: ಬಾಂಗ್ಲಾದೇಶ 106 ರನ್‌ಗೆ ಆಲೌಟ್

Update: 2019-11-22 11:26 GMT

ಕೋಲ್ಕತಾ. ನ.22: ವೇಗದ ಬೌಲರ್ ಇಶಾಂತ್ ಶರ್ಮಾ ನೇತೃತ್ವದ ಭಾರತದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡ ಶುಕ್ರವಾರ ಇಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಕೇವಲ 106 ರನ್‌ಗೆ ಗಳಿಸಿ ಆಲೌಟಾಗಿದೆ.

ಟಾಸ್ ಜಯಿಸಿದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಭಾರತದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್‌ನ ಪಂದ್ಯದ 6.3ನೇ ಓವರ್‌ನಲ್ಲಿ ಇಮ್ರುಲ್ ಕೈಸ್(4)ವಿಕೆಟನ್ನು ಕಳೆದುಕೊಂಡ ಬಾಂಗ್ಲಾ ಕುಸಿತದ ಹಾದಿ ಹಿಡಿಯಿತು. ನಾಯಕ ಮೊಮಿನುಲ್ ಹಕ್, ಮುಹಮ್ಮದ್ ಮಿಥುನ್ ಹಾಗೂ ಮುಶ್ಫಿಕುರ್ರಹೀಂ ಖಾತೆ ತೆರೆಯಲು ವಿಫಲವಾಗಿರುವುದು ಬಾಂಗ್ಲಾದ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿಯಾಯಿತು.

ಆರಂಭಿಕ ಆಟಗಾರ ಇಸ್ಲಾಂ(29), ಲಿಟನ್ ದಾಸ್(24) ಹಾಗೂ ನಯೀಮ್ ಹಸನ್(19)ಎರಡಂಕೆಯ ಸ್ಕೋರ್ ಗಳಿಸಿದರು.

 ಭಾರತದ ಪರ ಇಶಾಂತ್ ಶರ್ಮಾ(5-22)ಯಶಸ್ವಿ ಬೌಲರ್ ಎನಿಸಿಕೊಂಡರೆ, ಉಮೇಶ್ ಯಾದವ್(3-29) ಹಾಗೂ ಮುಹಮ್ಮದ್ ಶಮಿ(2-36)ಉಳಿದ ಐದು ವಿಕೆಟ್‌ಗಳನ್ನು ಹಂಚಿಕೊಂಡರು,.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News