ನಾಲ್ಕನೇ ವಿಕೆಟ್‌ಗೆ ಕೊಹ್ಲಿ-ರಹಾನೆ ದಾಖಲೆ

Update: 2019-11-23 17:54 GMT

ಕೋಲ್ಕತಾ, ನ.23: ಭಾರತದ ನಾಯಕ ವಿರಾಟ್ ಕೊಹ್ಲಿ ಮತುತಿ ಉಪನಾಯಕ ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ವಿಕೆಟ್‌ಗೆ ಅತಿ ಹೆಚ್ಚು ರನ್ ಗಳಿಸಿದ ಜೋಡಿ ಎಂಬ ದಾಖಲೆಯನ್ನು ಬರೆದಿದ್ದಾರೆ. ಈಡನ್ ಗಾರ್ಡನ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ 2ನೇ ದಿನವಾಗಿರುವ ಶನಿವಾರ ಭಾರತ ಪ್ರಾಬಲ್ಯ ಮುಂದುವರಿಸಿದ್ದರಿಂದ ಇಬ್ಬರು ಬ್ಯಾಟ್ಸ್‌ಮನ್‌ಗಳು ಈ ಸಾಧನೆ ಮಾಡಿದ್ದಾರೆ.ಕೊಹ್ಲಿ ಮತುತಿ ರಹಾನೆ 4 ನೇ ವಿಕೆಟ್‌ಗೆ ಶನಿವಾರ 99 ರನ್ ಸೇರಿಸಿದರು

4 ನೇ ವಿಕೆಟ್ ಜೊತೆಯಾಟದಲ್ಲಿ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ 42 ಇನಿಂಗ್ಸ್‌ಗಳಲ್ಲಿ 69.07 ರನ್ ಸರಾಸರಿಯಲ್ಲಿ 2763 ರನ್ ಸೇರಿಸಿದ್ದಾರೆ. ಪಾಕಿಸಾತಿನದ ಬ್ಯಾಟ್ಸ್‌ಮನ್‌ಗಳಾದ ಮಿಸ್ಬಾ-ಉಲ್-ಹಕ್ ಮತ್ತು ಯೂನಿಸ್ ಖಾನ್ ರನ್ 51 ಇನಿಂಗ್ಸ್ ಗಳಲ್ಲಿ 3138 ಸೇರಿಸಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮತ್ತು ಸೌರವ್ ಗಂಗುಲಿ 44 ಇನಿಂಗ್ಸ್‌ಗಳಲ್ಲಿ 2,695 ರನ್ ಗಳಿಸಿದ್ದ ದಾಖಲೆಯನ್ನು ಕೊಹ್ಲಿ, ರಹಾನೆ ಮುರಿದಿದ್ದಾರೆ. ಕೊಹ್ಲಿ ಮತ್ತು ರಹಾನೆ ತಮ್ಮ ಶತಕದ ಜೊತೆಯಾಟಕ್ಕೆ ಇಂದು ಒಂದು ರನ್ ಕಡಿಮೆಯಾಯಿತು.

ಭಾರತದ ಇನಿಂಗ್ಸ್‌ನ 61ನೇ ಓವರ್‌ನಲ್ಲಿ ರಹಾನೆ ಔಟಾದ ಕಾರಣದಿಂದಾಗಿ ಕೊಹ್ಲಿ ಮತ್ತು  ರಹಾನೆಗೆ ಶತಕದ ಜೊತೆಯಾಟ ಸಾಧ್ಯವಾಗಲಿಲ್ಲ. ಕೊಹ್ಲಿ ಅವರು ತಮ್ಮ 27ನೇ ಟೆಸ್ಟ್ ಶತಕವನ್ನು ಗಳಿಸಿದರು. ಡೇ ನೈಟ್ ಟೆಸ್ಟ್‌ನಲ್ಲಿ ಭಾರತದ ಪರ ಶತಕ ದಾಖಲಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೆ ವೇಳೆ 5, 000 ರನ್‌ಗಳ ದಾಟಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು.

ಏತನ್ಮಧ್ಯೆ ನಾಯಕನಾಗಿ ತನ್ನ 20ನೇ ಟೆಸ್ಟ್ ಶತಕ ದಾಖಲಿ ಸಿರುವ ಕೊಹ್ಲಿ ಅವರು ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ನಾಯಕರ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಗಳಿಸಿದರು. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ನಾಯಕರಾಗಿ 25 ಶತಕಗಳನ್ನು ದಾಖಲಿಸಿದ್ದರು. ಅವರ ಬಳಿಕ ಇದೀಗ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News